ಜಿಲ್ಲೆ

ಶ್ರೀ ರುದ್ರ ಹೋಮ ಹೋಮ ೨೩ರಂದು

ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ಲೋಕ ಕಲ್ಯಾಣಾರ್ಥ ಆಯೋಜನೆ
ವಿಜಯವಾಣಿ ಸುದ್ದಿಜಾಲ ಕಲಬುರಗಿ
ನಗರದ ರಾಜಾಪುರದಲ್ಲಿರುವ ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ಅಧಿಕ ಮಾಸ ನಿಮಿತ್ತ ಲೋಕಕಲ್ಯಾಣಾರ್ಥ ಭಾನುವಾರ (ಜು. ೨೩ ರಂದು) ಶ್ರೀ ರುದ್ರ ಹೋಮ ಹಮ್ಮಿಕೊಳ್ಳಲಾಗಿದೆ ಎಂದು ಆಶ್ರಮದ ಅಧ್ಯಕ್ಷರಾದ ಪೂಜ್ಯಶ್ರೀ ಸ್ವಾಮಿ ಮಹೇಶ್ವರಾನಂದ ತಿಳಿಸಿದ್ದಾರೆ.
ಶ್ರೀ ರುದ್ರ ಹೋಮದ ಮೂಲಕ ಭಗವಂತನ ಆರಾಧನೆ ಮಾಡಿದರೆ ಮನಸ್ಸಿಗೆ ಶಾಂತಿ, ನೆಮ್ಮದಿ ಸಿಗುವ ಜತೆಗೆ ಸಂಕಷ್ಟಗಳು ಸಹ ದೂರವಾಗಿ ಸಂತೋಷ ನೆಲೆಸಲಿದೆ. ಜನಕಲ್ಯಾಣಕ್ಕಾಗಿ ನಡೆಸುತ್ತಿರುವಂಥ ಈ ಮಹಾಯಜ್ಞದಲ್ಲಿ ಜನÀರಿಗೆ ಮುಕ್ತವಾಗಿ ಭಾಗವಹಿಸಲು ಹಾಗೂ ಸೇವೆ ಸಲ್ಲಿಸಲು ಅವಕಾಶವಿದೆ. ಹೆಚ್ಚಿನ ಜನರು ಪಾಲ್ಗೊಳ್ಳಬೇಕು ಎಂದು ಪೂಜ್ಯರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.
ಅಂದು ಬೆಳಗ್ಗೆ ೮ಕ್ಕೆ ಸಂಕಲ್ಪ ಪೂಜೆ ಇರಲಿದೆ. ಇದಾದ ನಂತರ ೯ಕ್ಕೆ ಶ್ರೀ ರುದ್ರ ಹೋಮ ಶುರುವಾಗಲಿದೆ. ಸಂಜೆ ೪ಕ್ಕೆ ಆಶ್ಲೇಷಾ ಬಲಿ ಪೂಜೆ ಜರುಗಲಿದೆ. ಯಲ್ಲಾಪುರ ಮಂಚಿಕೆರೆಯೆ ವೇದಮೂರ್ತಿ ವಿದ್ವಾನ್ ಸತ್ಯನಾರಾಯಣ ಜೋಶಿ ನೇತೃತ್ವದ ತಂಡ ಶಾಸ್ತೊçÃಕ್ತವಾಗಿ ಹೋಮ ಕಾರ್ಯಕ್ರಮ ನಡೆಸಿಕೊಡಲಿದೆ ಎಂದು ಹೇಳಿದ್ದಾರೆ.
ಬೆಂಗಳೂರು ರಾಮಕೃಷ್ಣ ಯೋಗಾಶ್ರಮದ ಪೂಜ್ಯಶ್ರೀ ಸ್ವಾಮಿ ಯೋಗೇಶ್ವರಾನಂದ ಮಹಾರಾಜ್, ಹೊಸಪೇಟೆ ಗೀತಾಶ್ರಮದ ಪೂಜ್ಯಶ್ರೀ ಸ್ವಾಮಿ ಸುಮೇಧಾನಂದ ಮಹಾರಾಜ್, ಕೊಪ್ಪಳದ ಪೂಜ್ಯಶ್ರೀ ಸ್ವಾಮಿ ಚೈತನ್ಯಾನಂದ ಮಹಾರಾಜ್ ಇತರರು ಭಾಗವಹಿಸುವರು. ಹೋಮ ಇತರೆ ಪೂಜಾ ಕಾರ್ಯಕ್ರಮಗಳಿಗಾಗಿ ಅಗತ್ಯ ತಯಾರಿ ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.