ಜಿಲ್ಲೆ

ಶ್ರೀ ರಾಮಕೃಷ್ಣ ವಿದ್ಯಾಶಾಲೆಯ ಅನಘ್ ನಾಗ್ ಸಾಧನೆ

ಮೈಸೂರು: ಎಐಎಂ-ಯೂನಿಸೆಫ್ ನ್ಯಾಷನಲ್ ಫೈನಾನ್ಸಿಯಲ್ ಲಿಟ್ರೆಸಿ ರಸಪ್ರಶ್ನೆ-2023 ರಾಷ್ಟ್ರ ಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ ನಗರದ ಯಾದವಗಿರಿಯಲ್ಲಿರುವ ಶ್ರೀ ರಾಮಕೃಷ್ಣ ವಿದ್ಯಾಶಾಲೆಯ 10ನೇ ತರಗತಿ ವಿದ್ಯಾರ್ಥಿ ಅನಘ್ ನಾಗ್ ಬಹುಮಾನ ಪಡೆದಿದ್ದಾರೆ.
ಕೇಂದ್ರದ ನೀತಿ ಆಯೋಗ, ಯೂನಿಸೆಫ್, ಅಟಲ್ ಇನೋವೇಷನ್ ಮಿಷನ್, ಯುವ ಜನರೇಷನ್ ಅನ್‌ಲಿಮಿಟೆಡ್‌ನಿಂದ ಆಯೋಜಿಸಿದ್ದ ರಾಷ್ಟ ಮಟ್ಟದ ಆನ್‌ಲೈನ್ ಸ್ಪರ್ಧೆಯಲ್ಲಿ ದೇಶಾದ್ಯಂತ 26 ವಿದ್ಯಾರ್ಥಿಗಳು ವಿಜೇತರಾಗಿದ್ದು, ಕರ್ನಾಟಕದಿಂದ ಅನಘ್‌ನಾಗ್ ಸೇರಿ ಇಬ್ಬರು ವಿದ್ಯಾರ್ಥಿಗಳು ವಿಜೇತರಾಗಿದ್ದಾರೆ.
ಆರ್ಥಿಕತೆಗೆ ಸಂಬಂಧಿಸಿದಂತೆ ಆ. 6ರಂದು ಕೇವಲ ಅರ್ಧ ಗಂಟೆ ಕಾಲ ಆಯೋಜಿಸಿದ್ದ ಬಹು ಆಯ್ಕೆ ಸ್ಪರ್ಧೆಯಲ್ಲಿ ಡೆಬಿಟ್, ಕ್ರೆಡಿಟ್, ಆರ್‌ಬಿಐ ನಿಯಮ, ಸಿಬಿಲ್ ಇನ್ನಿತರ ಮಾಹಿತಿಯನ್ನು ಒಳಗೊಂಡಿತ್ತು. ನಿಗದಿತ ಸಮಯದಲ್ಲಿ ಹೆಚ್ಚು ಪ್ರಶ್ನೆಗಳಿಗೆ ಸರಿ ಉತ್ತರ ಗುರುತು ಹಾಕಿದವರನ್ನು ಆಯ್ಕೆ ಮಾಡಲಾಗಿದೆ. ಶ್ರೀರಾಮಕೃಷ್ಣ ವಿದ್ಯಾಶಾಲೆಯಿಂದ 20 ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಿದ್ಯಾರ್ಥಿಯ ಸಾಧನೆಯನ್ನು ಶ್ರೀರಾಮಕೃಷ್ಣ ಆಶ್ರಮದ ಅಧ್ಯಕ್ಷ ಸ್ವಾಮಿ ಮುಕ್ತಿದಾನಂದ ಮಹಾರಾಜ್ ಪ್ರಶಂಸಿಸಿ ಅಭಿನಂದಿಸಿದ್ದಾರೆ.