ಕೊಳ್ಳೇಗಾಲ: ಪಟ್ಟಣದ ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ 356ನೇ ಆರಾಧನಾ ಮಹೋತ್ಸವದ ಅಂಗವಾಗಿ ವಿಶೇಷ ಪೂಜಾ ಕೈಂಕರ್ಯಗಳು ಶ್ರದ್ಧಾ-ಭಕ್ತಿಯಿಂದ ನೆರವೇರಿತು.
ಗುರುವಾರ ಬೆಳಿಗ್ಗೆ 6 ಗಂಟೆಗೆ ನಿರ್ಮಾಲ್ಯ, ಪಂಚಾಮೃತ ಅಭಿಷೇಕ, ಅರ್ಚನೆ, ಮಹಾಮಂಗಳಾರತಿ ನಂತರ ಪ್ರಸಾದ ವಿನಿಯೋಗ ಮುಂತಾದ ಪೂಜಾ ಕಾರ್ಯಗಳು ನಡೆಯಿತು.ಸಂಜೆ 7-30ಕ್ಕೆ ಸ್ವಸ್ತಿವಾಚನ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ಮಾಡಲಾಯಿತು. ಶುಕ್ರವಾರ ಮಧ್ಯಾರಾಧನೆ, ಮಧ್ಯಾಹ್ನ 12ಕ್ಕೆ ಅನ್ನ ಸಂತರ್ಪಣೆ, ಸಂಜೆ 5ಕ್ಕೆ ಸ್ವಸ್ತಿ ವಾಚನ, ಮಹಾಮಂಗಳಾರತಿ, ಪ್ರಸಾದಾ ವಿನಿಯೋಗ ನಡೆಯಿತು. ಸೆ.2ರ ಶನಿವಾರ ಉತ್ತರರಾಧನೆ ಪ್ರಯುಕ್ತ ಸಂಜೆ 7ಕ್ಕೆ ಸ್ವಸ್ತಿ ವಾಚನ, ಮಹಾ ಮಂಗಳಾರತಿ ಪ್ರಸಾದ ವಿನಿಯೋಗ ನಡೆಯಲಿದೆ.
ಶಾಸಕ ಎ.ಆರ್.ಕೃಷ್ಣಮೂರ್ತಿ ಪೂಜೆಯಲ್ಲಿ ಪಾಲ್ಗೊಂಡು ಮಾತನಾಡಿ, ಶ್ರೀ ಗುರು ರಾಘವೇಂದ್ರಸ್ವಾಮಿಗಳ ಆರಾಧನಾ ಮಹೋತ್ಸವದಲ್ಲಿ ಪಾಲ್ಗೊಳ್ಳುವ ಅವಕಾಶ ಸಿಕ್ಕಿದ್ದು ನನ್ನ ಪುಣ್ಯ. ಎಂದು ಭಾವಿಸುತ್ತೇನೆ. ಶ್ರೀ ಗುರು ರಾಘವೇಂದ್ರಸ್ವಾಮಿಗಳ ಕೃಪೆಯಿಂದ ನಾಡು ಸಮೃದ್ಧಿಯಾಗಿರಲಿ ಎಂದು ಪ್ರಾರ್ಥಿಸುತ್ತೇನೆ ಎಂದರು.
ದೇವಾಲಯದ ಟ್ರಸ್ಟಿಗಳಾದ ಆನಂದರಾಮಶೆಟ್ಟಿ, ಉದಯಕುಮಾರ್, ರಾಜು, ನರಸಿಂಹನ್, ಶ್ರೀಧರ್, ಮುಖಂಡರಾದ ಕೊಪ್ಪಾಳಿ ಮಹದೇವನಾಯ್ಕ, ಕಿನಕಹಳ್ಳಿ ಪ್ರಭುಪ್ರಸಾದ್, ಮರಿಬಸವಣ್ಣ, ಕಾಂತರಾಜು, ನರಸಿಂಹನ್, ಆಪ್ತಸಹಾಯಕ ಚೇತನ್, ಅರ್ಚಕ ನಂದಕುಮಾರ್, ಜಯರಾಜಪ್ಪ ಇದ್ದರು.