ಜಿಲ್ಲೆ

ಶ್ರೀ ರಾಘವೇಂದ್ರ ಸ್ವಾಮಿಗಳ 352ನೇ ಆರಾಧನೆ

ಕೆ.ಆರ್.ಸಾಗರದ ಶ್ರೀ ರಾಘವೇಂದ್ರ ಸ್ವಾಮಿಗಳ ಬೃಂದಾವನ ಮಠದಲ್ಲಿ 352ನೇ ಆರಾಧನಾ ಕಾರ್ಯಕ್ರಮದ ಅಂಗವಾಗಿ ಶನಿವಾರ ಶ್ರೀ ರಾಘವೇಂದ್ರ ಸ್ವಾಮಿಗಳ ಮಹಾರಥೋತ್ಸವ ಜರುಗಿತು.

ಕೆ.ಆರ್.ಸಾಗರ: ಇಲ್ಲಿನ ರೈಲು ನಿಲ್ದಾಣ ರಸ್ತೆಯಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಬೃಂದಾವನ ಮಠದಲ್ಲಿ 352ನೇ ಆರಾಧನಾ ಕಾರ್ಯಕ್ರಮದ ಅಂಗವಾಗಿ ಶನಿವಾರ ಗ್ರಾಮದ ರಾಜ ಬೀದಿಗಳಲ್ಲಿ ಮಹಾರಥೋತ್ಸವ ಜರುಗಿತು.

ಮುಖ್ಯ ಅರ್ಚಕ ಶ್ರೀ ಹಾವೇರಿ ರಾಘವೇಂದ್ರಚಾರ್ಯ ನೇತೃತ್ವದಲ್ಲಿ ಮುಂಜಾನೆಯಿಂದಲೇ ಸುಪ್ರಭಾತ, ವೇದ ಪಾರಾಯಣ ನಡೆಯಿತು. ನಂತರ ಪಾದಪೂಜೆ ನಡೆದು ಶ್ರೀ ರಾಘವೇಂದ್ರ ಸ್ವಾಮಿಗಳಿಗೆ ವಿಶೇಷವಾಗಿ ವಿವಿಧ ಹೂಗಳಿಂದ ಅಲಂಕರಿಸಿ ಪೂಜೆ ಸಲ್ಲಿಸಿ ಶ್ರೀ ರಾಘವೇಂದ್ರರ ಪ್ರತಿಮೆಯನ್ನು ರಥದಲ್ಲಿರಿಸಿ ಅಲಂಕರಿಸಿ ಮಂಗಳವಾದ್ಯದ ಸಮೇತ ರಥವನ್ನು ಎಳೆಯಲಾಯಿತು. ಅರ್ಚಕರಾದ ಸುರೇಂದ್ರಚಾರ್ಯ ಮತ್ತು ಶ್ರೀ ವಿಜೇಂದ್ರಚಾರ್ಯ ಉಪಸ್ಥಿತರಿದ್ದರು.