ಧಾರವಾಡ: ಮಂತ್ರಾಲಯ ಶಾಖಾ ಮಠ, ನಗರದ ಯಾಲಕ್ಕಿಶೆಟ್ಟರ್ ಕಾಲನಿ ಪುರಂದರ ಮಂಟಪದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ 352ನೇ ಆರಾಧನಾ ಮಹೋತ್ಸವವನ್ನು ಆ. 31ರಿಂದ ಸೆ. 2ರವರೆಗೆ ಮಠದಲ್ಲಿ ಆಚರಿಸಲಾಗುವುದು.
ಮೂರು ದಿನಗಳ ಆರಾಧನೆಯಲ್ಲಿ ರಾಯರಿಗೆ ನಿತ್ಯ ಸುಪ್ರಭಾತಸೇವೆ, ನಗರ ಸಂಕೀರ್ತನೆ, ಪಂಚಾಮೃತ ಅಭಿಷೇಕ, ಕ್ಷೀರಾಭಿಷೇಕ, ಭಜನಾ ಮಂಡಳಿಗಳಿಂದ ಸಂಗೀತ ಸೇವೆ, ಸಂಜೆ ಪಲ್ಲಕ್ಕಿ ಸೇವೆ, ಡೋಲೊತ್ಸವ, ಮಹಾ ಮಂಗಳಾರತಿ ಸೇವೆ ನಡೆಯಲಿದೆ. ವಿಶೇಷವಾಗಿ ಸೆ. 1ರಂದು ಮಧ್ಯಾರಾಧನೆ ನಿಮಿತ್ತ ಶ್ರೀ ರಾಘವೇಂದ್ರ ಸ್ವಾಮಿಗಳ ಅಷ್ಟಾಕ್ಷರ ಮಂತ್ರ ಜಪ, ಉತ್ತರ ಆರಾಧನೆ ನಿಮಿತ್ತ ರಾಯರ ರಥೋತ್ಸವ, ಶ್ರೀನಿವಾಸ ಕಲ್ಯಾಣ ಮಹೋತ್ಸವ ನಡೆಯಲಿದೆ.
ವಿದ್ವಾನ್ ಪಂ. ವಿ.ಜಿ. ನವಲಗುಂದ, ಶ್ರೀನಿವಾಸ ನವಲಗುಂದ, ಬಿಡಿಕರ, ಭಂಡಾಚಾರ್ಯ ಗಿಡದ ಹುಬ್ಬಳ್ಳಿ ಅವರಿಂದ ಪ್ರವಚನ ನಡೆಯಲಿದೆ. ಆರಾಧನೆಗೂ ಪೂರ್ವದಲ್ಲಿ ಆ. 29, 30ರಂದು ಉಪಾಕಾರ್ಮ, ಆ. 30ರಂದು ಗೋಧೂಳಿ ಮುಹೂರ್ತದಲ್ಲಿ ಶಾಕೋತ್ಸವ, ಧ್ವಜಾರೋಹಣ ನೆರವೇರಿಸಲಾಗುವುದು. ಭಕ್ತರು ಎಲ್ಲ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು ಎಂದು ಪ್ರಕಟಣೆ ಕೋರಿದೆ.