ಜಿಲ್ಲೆ

ಶ್ರೀ ಮೈಲಾರಲಿಂಗೇಶ್ವರ ಸ್ವಾಮಿಗೆ ಅಲಂಕಾರ

ಎಸ್.ಎನ್.ರವೀಂದ್ರ

ಬೀರೂರು: ಪಟ್ಟಣದ ಸರಸ್ವತಿಪುರಂ ಬಡಾವಣೆ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿಗೆ ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ಮಂಗಳವಾರ ಹಣ್ಣುಗಳಿಂದ ವಿಶೇಷವಾಗಿ ಅಲಂಕರಿಸಲಾಗಿತ್ತು.

ದೇವರ ಮೂಲಮೂರ್ತಿಗೆ ಅಭಿಷೇಕ, ದೋಣಿಸೇವೆ ಹಾಗೂ ಪುಷ್ಪಾಲಂಕಾರ, ಮಹಾಮಂಗಳಾರತಿ ನೆರವೇರಿಸಿದರು. ಧನುರ್ಮಾಸ ಆರಂಭವಾದ ದಿನದಿಂದಲೂ ಪ್ರತಿ ದಿನ ವಿಶೇಷ ಪೂಜಾ ಕೈಂಕರ್ಯಗಳು ನಡೆಯುತ್ತಿದ್ದವು. ಭಕ್ತರು ದೇವಾಲಯಕ್ಕೆ ಭೇಟಿ ನೀಡಿ ಹಣ್ಣುಕಾಯಿ ಸಮರ್ಪಿಸಿದರು.