ಜಿಲ್ಲೆ

ಶ್ರೀ ಮುಳಕಟ್ಟಮ್ಮ ದೇವಿಗೆ ತಂಬಿಟ್ಟಿನ ಆರತಿ.

reportermys

ಚನ್ನರಾಯಪಟ್ಟಣ: ತಾಲೂಕಿನ ನಾಗನಹಳ್ಳಿ ಗ್ರಾಮದಲ್ಲಿ ಶ್ರೀ ಮುಳಕಟ್ಟಮ್ಮ ದೇವಿಗೆ ಹಬ್ಬದ ಪ್ರಯುಕ್ತ ಮಂಗಳವಾರ ನೈವೇದ್ಯ ಹಾಗೂ ತಂಬಿಟ್ಟಿನ ಆರತಿ ಕಾರ್ಯಕ್ರಮ ವಿಜೃಂಭಣೆಯಿಂದ ನೆರವೇರಿತು.

ಈ ಹಿನ್ನೆಲೆಯಲ್ಲಿ ಮುಂಜಾನೆಯೇ ಗ್ರಾಮದ ದೇಗುಲಗಳಿಗೆ ಹೂವಿನ ಚಪ್ಪರ ಹಾಕಲಾಗಿದ್ದು ವಿದ್ಯುತ್ ಹಾಗೂ ವಿವಿಧ ಬಗೆಯ ಪುಷ್ಪಗಳಿಂದ ಸಿಂಗರಿಸಲಾಗಿತ್ತು. ಮಹಿಳೆಯರು ನೀರಾಯಿಸಿ ಸ್ವಚ್ಛಗೊಳಿಸಿ ರಂಗೋಲಿ ಬಿಡಿಸಿದರು.

ಬೆಳಗ್ಗೆ 9.30ರಲ್ಲಿ ಗ್ರಾಮದ ಹೆಣ್ಣುಮಕ್ಕಳು ನೈವೇದ್ಯ ಹಾಗೂ ತಂಬಿಟ್ಟಿನ ಆರತಿ ಹಿಡಿದು ಮೆರವಣಿಗೆಯೊಂದಿಗೆ ಸಾಗಿದರೆ ಹಿರಿಯ ತಾಯಂದಿರು ದೇವಿಯ ಮೇಲಿನ ಸೋಬಾನೆ ಪದ ಹಾಡಿದರು. ಹಣ್ಣು- ಕಾಯಿ ಅರ್ಪಿಸಿದ ಭಕ್ತರು ದೇವಿಯ ದರ್ಶನ ಪಡೆದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸಿ.ಮಂಜೇಗೌಡ, ಗ್ರಾಮ ಪಂಚಾಯಿತಿ ಸದಸ್ಯರಾದ ರವಿ, ಬಾಲಕೃಷ್ಣ, ಸಮಾಜ ಸೇವಕರಾದ ಪವನ್, ಕಿಶೋರ್ ಹಾಗೂ ಇತರರು ಇದ್ದರು.