ಜಿಲ್ಲೆ

ಶ್ರೀ ಬೃಹನ್ಮಠ ಸಂಯುಕ್ತ ಪಿಯು ವಿದ್ಯಾರ್ಥಿಗಳಿಗೆ ಸಮಗ್ರ ಪ್ರಶಸ್ತಿ

ಡಿ.ಪಿ.ನಾಗರಾಜ ಶ್ರೇಷ್ಠಿ

ಚಿತ್ರದುರ್ಗ: ಪ್ರಸಕ್ತ ಶೈಕ್ಷಣಿಕ ಸಾಲಿನ ಪದವಿಪೂರ್ವ ಕಾಲೇಜುಗಳ ತಾಲೂಕು ಹಂತದ ಸಾಂಸ್ಕೃತಿಕ ಚಟುವಟಿಕೆಗಳ ಸ್ಪರ್ಧೆಗಳಲ್ಲಿ ನಗರದ ಎಸ್‌ಜೆಎಂ ವಿದ್ಯಾಪೀಠದ ಶ್ರೀ ಬೃಹನ್ಮಠ ಸಂಯುಕ್ತ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳು ಸಮಗ್ರ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಪ್ರಥಮ ಪಿಯುಸಿ ವಿಭಾಗದಲ್ಲಿ ಭಾವಗೀತೆ ಸ್ಪರ್ಧೆ-ಸುರಕ್ಷಾ ಬಿ. ಹಳೂರ(ಪ್ರ), ಕನ್ನಡ ಚರ್ಚಾ ಸ್ಪರ್ಧೆ-ಆರ್. ಅರ್ಪಿತಾ(ಪ್ರ), ಇಂಗ್ಲಿಷ್ ಚರ್ಚಾ ಸ್ಪರ್ಧೆ-ಸೈಯದ ಸಿಮ್ರಾನ್(ತೃ), ಇಂಗ್ಲಿಷ್ ಪ್ರಬಂಧ ಸರ್ಧೆ-ಕೆ. ಅಂಕಿತಾ(ಪ್ರ), ಆಶುಭಾಷಣ-ಇ. ಲಕ್ಷ್ಮೀ(ದ್ವಿ), ಏಕ ಪಾತ್ರಾಭಿನಯ-ಎಂ. ಮೋನಿಕಾ(ದ್ವಿ).

ದ್ವಿತೀಯ ಪಿ.ಯು.ಸಿ ವಿಭಾಗದ ಭಾವಗೀತೆ ಸ್ಪರ್ಧೆ-ಕೆ.ಎಸ್. ಯಶಸ್ವಿನಿ(ಪ್ರ), ಭಕ್ತಿಗೀತೆ-ಕೆ.ಬಿ. ಮಾನಸಾ (ಪ್ರ), ಜಾನಪದ ಗೀತೆ -ಜಿ.ಆರ್. ಅನನ್ಯಾ(ಪ್ರ), ಆಶುಭಾಷಣ-ಕೆ. ರಾಹುಲ್(ಪ್ರ), ಕನ್ನಡ ಚರ್ಚಾ ಸ್ಪರ್ಧೆ-ಆರ್. ಲೀಲಾವತಿ (ಪ್ರ), ಇಂಗ್ಲಿಷ್ ಚರ್ಚಾ ಸ್ಪರ್ಧೆ- ಅಸ್ಮಬಾನು(ತೃ), ಕನ್ನಡ ಪ್ರಬಂಧ ಸ್ಪರ್ಧೆ-ಆರ್. ಪೂರ್ಣಿಮಾ(ದ್ವಿ), ಇಂಗ್ಲಿಷ್ ಪ್ರಬಂಧ ಸ್ಪರ್ಧೆ-ಎಂ. ಮೋನಿಷಾ(ದ್ವಿ), ಚಿತ್ರಕಲೆ-ಎಸ್. ಸಂಜು(ದ್ವಿ), ರಸಪ್ರಶ್ನೆ ಸ್ಪರ್ಧೆ-ಜಿ.ಎಸ್. ತಸ್ವಿನಿ ಮತ್ತು ಜೆ.ಎಸ್. ಪ್ರಮೋದ್ (ತೃ).

ತಾಲೂಕು ಮಟ್ಟದ ಸಾಂಸ್ಕೃತಿಕ ಚಟುವಟಿಕೆಗಳ ಸ್ಪರ್ಧೆಗಳಲ್ಲಿ ಸಮಗ್ರ ಪ್ರಶಸ್ತಿ ಪಡೆದಿರುವ ಹಾಗೂ ಪ್ರಥಮ ಸ್ಥಾನದೊಂದಿಗೆ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳ ಸಾಧನೆಗೆ ಎಸ್‌ಜೆ.ಎಂ ವಿದ್ಯಾಪೀಠದ ಆಡಳಿತ ಮಂಡಳಿ ಹರ್ಷ ವ್ಯಕ್ತಪಡಿಸಿದೆ.

...