ಚಿತ್ರದುರ್ಗ:ಹೊಳಲ್ಕೆರೆ ತಾಲೂಕು ಬ್ರಹ್ಮಪುರ(ದಗ್ಗೆ)ದಲ್ಲಿ ಇತ್ತೀಚೆಗೆ ಶ್ರೀ ಬಸವೇಶ್ವರಸ್ವಾಮಿ ಜಾತ್ರಾ ಮಹೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು. ಫೆ.26ರಿಂದ ಆರಂಭವಾದ ಜಾತ್ರಾ ಮಹೋತ್ಸವದಲ್ಲಿ ಅಭಿಷೇಕ, 101 ಪೂಜೆಗಳು, ಗಂಗಾಪೂಜೆ, ಧ್ವಜಾರೋಹಣ, ಕಂಕಣಧಾರಣೆ, ಉತ್ಸವಗಳು, ಕೆಂಡಾರ್ಚನೆ, ಕತ್ತಿ ಪವಾಡ, ಧೂಳು ಉತ್ಸವ, ಹೂವಿನ ಪಲ್ಲಕ್ಕಿ ಇತ್ಯಾಧಿ ಧಾರ್ಮಿಕ ವಿಧಿ ಗಳೊಂದಿಗೆ ಅದ್ದೂರಿಯಾಗಿ ನೆರವೇರಿತು.