ಕೊಡೇಕಲ್ : ಕಾಲಜ್ಞಾನ ವಚನಗಳನ್ನು ನಾಡಿಗೆ ನೀಡಿರುವ ಖ್ಯಾತಿಯ ಕೊಡೇಕಲ್‌ನಲ್ಲಿ ೧೯೯೮ರ ಸೆ.೨೪ರಂದು ಬಸವ ಪೀಠಾಧಿಪತಿ ಶ್ರೀ ವೀರಯ್ಯ ಅಪ್ಪನವರ ಅಮೃತ ಹಸ್ತದಿಂದ ಶುರುವಾದ ಶ್ರೀ ಬಸವೇಶ್ವರ ಪತ್ತಿನ ಸಹಕಾರ ಸಂಘಕ್ಕೆ ಭಾನುವಾರ ಬೆಳ್ಳಿ ಹಬ್ಬದ ಸಂಭ್ರಮ.
ವಸುಧೈವ ಕುಟುಂಬಕA ಎನ್ನುವಂತೆ ತಾನು ಎಲ್ಲರಿಗಾಗಿ ಎಲ್ಲರೂ ತನಗಾಗಿ ಎಂಬ ಧ್ಯೇಯವಾಕ್ಯದೊಂದಿಗೆ ಪಂಜಗಲ್ ಕುಟುಂಬದ ದಿ.ಮಲ್ಲಿಕಾರ್ಜುನ ಪಂಜಗಲ್ ಸ್ಥಾಪಿಸಿ ಅಧ್ಯಕ್ಷರಾಗಿದ್ದ ಈ ಸಂಘ ಗ್ರಾಮೀಣ ಭಾಗದಲ್ಲಿ ಹಿಂದುಳಿದವರು, ದುರ್ಬಲ ವರ್ಗದ ಸದಸ್ಯರು, ಸಣ್ಣಪುಟ್ಟ ವ್ಯಾಪಾರಿಗಳಿಗೆ ನಾನಾ ಸೇವಾ ಸೌಲಭ್ಯಗಳ ಮೂಲಕ ಆರ್ಥಿಕವಾಗಿ ಸಶಕ್ತಗೊಳಿಸುವತ್ತ ಹೆಜ್ಜೆ ಇರಿಸಿದೆ.
ಕೇವಲ ೩೦೦ ಸದಸ್ಯರ ೩ ಲಕ್ಷ ಷೇರು ಹಣದೊಂದಿಗೆ ಶುರುವಾದ ಸಂಘ ಇಂದು ಹೆಮ್ಮರವಾಗಿ ಬೆಳೆದಿದ್ದು, ೧೧೨೩ ಸದಸ್ಯರನ್ನು ಒಳಗೊಂಡು ೪೫ ಲಕ್ಷಕ್ಕೂ ಹೆಚ್ಚು ಷೇರು ಹಣದೊಂದಿಗೆ ಹೋಬಳಿಯಲ್ಲೇ ಸಹಕಾರ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿ ಅಭಿವೃದ್ಧಿಯತ್ತ ಸಾಗಿದೆ.
ವರ್ಷದಿಂದ ವರ್ಷಕ್ಕೆ ಲಾಭ ಗಳಿಸುತ್ತಿರುವ ಸಂಘ ಷೇರುದಾರರಿಗೆ ಶೇ ೨೦ ಲಾಭಾಂಶ ನೀಡುತ್ತ ಬರುತ್ತಿದೆ. ಶೈಕ್ಷಣಿಕ ಕ್ಷೇತ್ರದ ಅಭ್ಯುದಯಕ್ಕೂ ಪ್ರೋತ್ಸಾಹಿಸುವ ಉz್ದೆÃಶದಿಂದ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಷೇರುದಾರರ ಮೂರು ಮಕ್ಕಳಿಗೆ ಪ್ರೋತ್ಸಾಹ ಧನ ಮತ್ತು ಪ್ರತಿಭಾ ಪುರಸ್ಕಾರ ನೀಡುತ್ತ ಬರುತ್ತಿದೆ.
ವಿಶೇಷ: ೨೫ ವರ್ಷಗಳಿಂದ ಸಹಕಾರ ಕ್ಷೇತ್ರದಲ್ಲಿ ಯಶಸ್ವಿ ಪಥದಲ್ಲಿ ಸಾಗುತ್ತಿರುವ ಕೊಡೇಕಲ್ ಶ್ರೀ ಬಸವೇಶ್ವರ ಪತ್ತಿನ ಸಹಕಾರ ಸಂಘ ಹಲವು ವಿಶೇಷ ಸೌಲಭ್ಯಗಳ ಮೂಲಕ ಗ್ರಾಹಕರಿಗೆ ಹತ್ತಿರವಾಗಿದೆ. ಸಂಘದಿAದ ಆರ್‌ಟಿಜಿಎಸ್/ ನೆಫ್ಟ್, ಇ-ಸ್ಟಾÈಂಪಿAಗ್, ಸಂಘದ ಸದಸ್ಯರು ಮತ್ತವರ ಕುಟುಂಬದವರಿಗೆ ಸರ್ಕಾರದ ಯಶಸ್ವಿನಿ ಆರೋಗ್ಯ ಯೋಜನೆ ಹಾಗೂ ಸದಸ್ಯರು ಮತ್ತು ಸಾಲಗಾರರಿಗೆ ವೈಯಕ್ತಿಕ ಅಪಘಾತ ವಿಮಾ ಸೌಲಭ್ಯ ಕಲ್ಪಿಸಿದೆ.