ಹರಿ ಓಂ ಬಿಲ್ಡರ್ ಮುಖ್ಯಸ್ಥ ಜಿ.ರಮೇಶ್  
ಜಿಲ್ಲೆ

ಶ್ರೀ ದೇವಿರಮ್ಮ ನೃತ್ಯ ನಮನ ಡಿ. ೧ಕ್ಕೆ

ನಿತ್ಯಾನಂದ ಎಸ್.ಎನ್.

ಚಿಕ್ಕಮಗಳೂರು: ಕಲ್ಕಟ್ಟೆ ಪುಸ್ತಕ ಮನೆಯ ೨೧ನೇ ವಾರ್ಷಿಕೋತ್ಸವದ ಅಂಗವಾಗಿ ಮಲ್ಲಿಗೆ ಸುಗಮ ಸಂಗೀತ ಟ್ರಸ್ಟ್, ಹರಿ ಓಂ ಬಿಲ್ಡರ್ಸ್ ಸಹಯೋಗದಲ್ಲಿ ಡಿ. ೧ರಂದು ಸಂಜೆ ೬ ಗಂಟೆಗೆ ನಗರದ ಕುವೆಂಪು ಕಲಮಂದಿರದಲ್ಲಿ ಶ್ರೀದೇವಿರಮ್ಮ ನೃತ್ಯ ನಮನ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಹರಿ ಓಂ ಬಿಲ್ಡರ್ ಮುಖ್ಯಸ್ಥ ಜಿ.ರಮೇಶ್ ತಿಳಿಸಿದರು.

ನಗರದ ಪ್ರೆಸ್‌ಕ್ಲಬ್ ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿಕ್ಕಮಗಳೂರಿನ ವಿದುಷಿ ಜ್ಯೋತಿ ಪ್ರಕಾಶ್ ನೇತೃತ್ವದ ನೂಪುರ ಅಕಾಡೆಮಿ ಪರ್ಫಾರ್ಮಿಂಗ್ ಆರ್ಟ್ಸ್ ತಂಡದ ೪೦ಕ್ಕೂ ಹೆಚ್ಚು ಕಲಾವಿದೆಯರು ಶ್ರೀ ದೇವಿರಮ್ಮನವರ ಕುರಿತಾಗಿ ಎಚ್.ಎಂ.ನಾಗರಾಜರಾವ್ ಕಲ್ಕಟ್ಟೆ ರಚಿಸಿ, ಸಂಗೀತ ನೀಡಿದ ಭಕ್ತಿಗೀತೆಗಳಿಗೆ ನೃತ್ಯ ಮಾಡಲಿದ್ದಾರೆ. ಮೈಸೂರಿನ ನೃತ್ಯ ವಿದುಷಿ ಕಾತ್ಯಾಯಿನಿ ಅವರು ಭರತನಾಟ್ಯ ನೆರವೇರಿಸಿಕೊಡಲಿದ್ದಾರೆ ಎಂದು ಮಾಹಿತಿ ನೀಡಿದರು.

ಇದ ವೇಳೆ ಕಲ್ಕಟ್ಟೆ ಪುಸ್ತಕ ಮನೆಯ ವಾರ್ಷಿಕ ಪುರಸ್ಕಾರವಾದ ಕಲ್ಕಟ್ಟೆ ಕನ್ನಡಿಗ ಪ್ರಶಸ್ತಿಯನ್ನು ಅಮೆರಿಕದಲ್ಲಿ ಕನ್ನಡ ಸೇವೆ ಸಲ್ಲಿಸುತ್ತಿರುವ ಚಿಕ್ಕಮಗಳೂರಿನ ರಘು ಹಾಲೂರು ಹಾಗೂ ಕಲ್ಕಟ್ಟೆ ಕನ್ನಡತಿ ಪ್ರಶಸ್ತಿಯನ್ನು ವಿದುಷಿ ಜ್ಯೋತಿ ಪ್ರಕಾಶ್ ಅವರಿಗೆ ಪ್ರದಾನ ಮಾಡಲಾಗುತ್ತಿದೆ ಎಂದು ವಿವರಿಸಿದ್ದರು.

ಬೆಂಗಳೂರಿನ ಆಧ್ಯಾತ್ಮಿಕ ಚಿಂತಕ ಚಂದ್ರಶೇಖರ ಭಟ್ ಗುರ್ಜರ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಡಾ. ಜೆ.ಪಿ.ಕೃಷ್ಣೆಗೌಡ, ಡಾ.ಪುಟ್ಟಾನಾಯ್ಕ, ಡಾ.ಸಿ.ಕೆ.ಸುಬ್ಬರಾಯ, ಎಂ.ಆರ್.ಗುರುಮೂರ್ತಿ, ಡಿ.ಎಚ್.ನಟರಾಜ್, ಕುಲಶೇಖರ್, ಎಂ.ಆರ್.ನಾಗರಾಜ್, ಸುರೇಂದ್ರಶೆಟ್ಟಿ ಉಪಸ್ಥಿತರಿರಲಿದ್ದಾರೆ ಎಂದರು.