ಜಿಲ್ಲೆ

ಶ್ರೀ ದುರ್ಗಾಪರಮೇಶ್ವರಿಗೆ ಬಾಣಂತಿ ಅಲಂಕಾರ

ಎಸ್.ಎನ್.ರವೀಂದ್ರ

ಜಯಪುರ: ಶರನ್ನವರಾತ್ರಿ ಮಹೋತ್ಸವ ಅಂಗವಾಗಿ ಜಯಪುರದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಭಾನುವಾರ ಅಮಾವಾಸ್ಯೆ ಪ್ರಯುಕ್ತ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರಿಗೆ ಕಷಾಯ ತೀರ್ಥ ಅಭಿಷೇಕ ಹಾಗೂ ಬಾಣಂತಿ ಅಲಂಕಾರ ಮಾಡಲಾಯಿತು.

ದಸರಾ ಉತ್ಸವ ಕುರಿತು ದೇಗುಲ ಸೇವಾ ಸಮಿತಿ ಅಧ್ಯಕ್ಷ ಡಿ.ಬಿ.ರಾಜೇಂದ್ರ ಮಾತನಾಡಿ, ಸೆ.22ರಿಂದ ಪ್ರತಿದಿನ ದೇವಸ್ಥಾನದಲ್ಲಿ ಕಲ್ಪೋಕ್ತ ಪೂಜೆ, ಅರ್ಚನೆ, ಚಂಡಿಕಾ ಪಾರಾಯಣ ಹಾಗೂ ಸಂಜೆ ದೀಪ ನಮಸ್ಕಾರ ನಡೆಯಲಿದೆ. ಪ್ರತಿ ದಿನ ದೇವಿಗೆ ವಿವಿಧ ಅಲಂಕಾರ ಮಾಡಲಾಗುವುದು. 22ರಂದು ಪಾಡ್ಯ ದೇವಿಗೆ ಶೈಲಪುತ್ರಿ ಅಲಂಕಾರ ಹಾಗೂ ಗಣಹೋಮ ನಡೆಯಲಿದೆ ಎಂದು ತಿಳಿಸಿದರು. ಅ.2ರಂದು ಸಂಜೆ 6 ಗಂಟೆಗೆ ಜಯಪುರ ಮುಖ್ಯಬೀದಿಯಲ್ಲಿ ಶ್ರೀ ದುರ್ಗಾಪರಮೇಶ್ವರಿ ದೇವಿ ಅಡ್ಡಪಲ್ಲಕ್ಕಿ ಉತ್ಸವ ನಡೆಯಲಿದೆ ಎಂದು ಹೇಳಿದರು.