ಜಿಲ್ಲೆ

ಶ್ರೀ ದುರ್ಗಾದೇವಿ ದೇವಸ್ಥಾನದಲ್ಲಿ ತೊಟ್ಟಿಲೋತ್ಸವ

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ

ದುರ್ಗಾಷ್ಟಮಿ ನಿಮಿತ್ತ ಶ್ರೀದುರ್ಗಾದೇವಿ ದೇವಸ್ಥಾನ ಎಸ್​ಎಸ್​ಕೆ ಪಂಚ ಟ್ರಸ್ಟ್ ವತಿಯಿಂದ ದಾಜಿಬಾನ ಪೇಟೆಯ ಶ್ರೀ ದುರ್ಗಾದೇವಿ ದೇವಸ್ಥಾನದಲ್ಲಿ ಶ್ರೀ ದ್ಯಾಮವ್ವ ಹಾಗೂ ಶ್ರೀ ದುರ್ಗಾದೇವಿ ಮಾತೆಯರ ತೊಟ್ಟಿಲೋತ್ಸವ ಕಾರ್ಯಕ್ರಮ ಬುಧವಾರ ಜರುಗಿತು.

ಮಹಿಳಾ ಮಂಡಳಗಳ ಪದಾಧಿಕಾರಿಗಳು ಆಗಮಿಸಿ, ಶ್ರೀದೇವಿಯರನ್ನು ತೊಟ್ಟಿಲಲ್ಲಿ ತೂಗಿ ಹಾಡು ಹಾಡಿದರು. ಪ್ರಾರ್ಥನೆ ಸಲ್ಲಿಸಿದ ನಂತರ ದೇವಿಯರಿಗೆ ನಾಮಕರಣ ಮಾಡಲಾಯಿತು. ಶ್ರೀದೇವಿಯರಿಗೆ ವಿಶೇಷ ಅಲಂಕಾರದೊಂದಿಗೆ ಪೂಜೆ-ಪುನಸ್ಕಾರಗಳು ಅತ್ಯಂತ ವಿಜೃಂಭಣೆಯಿಂದ ಜರುಗಿದವು. ಶಿಲ್ಪಾ ಜಗದೀಶ ಶೆಟ್ಟರ್, ಭಾಗ್ಯಶ್ರೀ ಭಾಸ್ಕರ ಜಿತೂರಿ, ಭಾಗ್ಯಶ್ರೀ ನೀಲಕಂಠ ಜಡಿ, ಪಾಲಿಕೆ ಸದಸ್ಯೆ ಸುನಿತಾ ಪ್ರಕಾಶ ಬುರಬುರೆ ಅವರು ತೊಟ್ಟಿಲೋತ್ಸವದಲ್ಲಿ ಪಾಲ್ಗೊಂಡಿದ್ದರು. ಪೂಜೆ ನಂತರ ಮಹಿಳೆಯರಿಗೆ ಉಡಿ ತುಂಬಲಾಯಿತು.

ಚೀಫ್ ಟ್ರಸ್ಟಿ ತಾರಾಸಾ ದೊಂಗಡಿ, ಜಾಯಿಂಟ್ ಚೀಫ್ ಟ್ರಸ್ಟಿ ನೀಲಕಂಠ ಜಡಿ, ಗೌರವ ಕಾರ್ಯದರ್ಶಿ ಭಾಸ್ಕರ ಜಿತೂರಿ , ಕೋಶಾಧಿಕಾರಿ ಅಶೋಕ ಕೆ ಕಲಬುರ್ಗಿ, ಟ್ರಸ್ಟಿಗಳಾದ ಎನ್.ಆರ್. ಹಬೀಬ, ಎ.ಪಿ. ಪವಾರ, ಪೂಜಾರಿ ಮನೆತನದ ಹಿರಿಯರಾದ ವಿಷ್ಣುಸಾ ಪೂಜಾರಿ, ಸೂರ್ಯನಾರಾಯಣ ಅರ್ಜುನಸಾ ಪೂಜಾರಿ, ಮಂಜುನಾಥ ಪೂಜಾರಿ, ಎನ್.ಡಿ. ಪೂಜಾರಿ, ಮೋಹನಸಾ ಮಗಜಿಕೊಂಡಿ, ಟಿ.ವಿ. ಪೂಜಾರಿ, ಪ್ರಮುಖರಾದ ಕೆ.ಪಿ. ಪೂಜಾರಿ, ಹುಡಾ ಮಾಜಿ ಅಧ್ಯಕ್ಷ ನಾಗೇಶ ಕಲಬುರ್ಗಿ, ಶ್ರೀನಿವಾಸ ರತನ, ವೆಂಕಟೇಶ ಪೂಜಾರಿ, ಗಾಯತ್ರಿ ಮಗಜಿ, ಶೋಭಾ ಹಬೀಬ, ರುಕ್ಮಿಣಿಬಾಯಿ ಬುರುಬುರೆ, ಸವಿತಾ ಖೋಡೆ, ವಿಜಯಲಕ್ಷ್ಮೀ ಖೋಡೆ , ಗೀತಾ ಕಲಬುರ್ಗಿ, ಜಯ]ೕ ಬದ್ದಿ, ಗೀತಾ ದಾನಿ, ಲಲಿತಾ ಪೂಜಾರಿ ಇತರರು ಇದ್ದರು.