ಸುಂಟಿಕೊಪ್ಪ: ಸುಂಟಿಕೊಪ್ಪ ಶ್ರೀ ಚಾಮುಂಡೇಶ್ವರಿ, ಶ್ರೀಮುತ್ತಪ್ಪ ಮತ್ತು ಪರಿವಾರ ದೇವರುಗಳ ತೆರೆ ಮಹೋತ್ಸವಕ್ಕೆ ವಿಶೇಷ ಪೂಜಾ ವಿಧಿ ವಿಧಾನಗಳೊಂದಿಗೆ ಶನಿವಾರ ಮುಂಜಾನೆ ಧ್ವಜಾರೋಹಣದೊಂದಿಗೆ ಆರಂಭಗೊಂಡ ತೆರೆ ಮಹೋತ್ಸವವು ಸೋಮವಾರ ಮಧ್ಯಾಹ್ನದವರೆಗೂ ವಿವಿಧ ಕೋಲಗಳು ಸೇರಿದಂತೆ ವಿಶೇಷ ಪೂಜಾ ವಿಧಿ ವಿಧಾನಗಳೊಂದಿಗೆ ಶೃದ್ಧಾಭಕ್ತಿಯಿಂದ ನಡೆದವು. ಮಧ್ಯಾಹ್ನ ಬಾವುಟವನ್ನು ಇಳಿಸುವುದರೊಂದಿಗೆ ಶ್ರೀ ಚಾಮುಂಡೇಶ್ವರಿ, ಶ್ರೀಮುತ್ತಪ್ಪ ಮತ್ತು ಪರಿವಾರ ದೇವರುಗಳ ತೆರೆ ಸಂಪನ್ನಗೊಂಡಿತು.
ಶ್ರೀ ಚಾಮುಂಡೇಶ್ವರಿ ಮತ್ತು ಶ್ರೀ ಮುತ್ತಪ್ಪ ಹಾಗೂ ಪರಿವಾರ ದೇವರುಗಳ ತೆರೆ ಮಹೋತ್ಸವದ ಅಂಗವಾಗಿ ದೇವಾಲಯವನ್ನು ವಿದ್ಯುತ್ ದೀಪ ಹಾಗೂ ಬಣ್ಣ ಬಣ್ಣದ ಹೂಗಳಿಂದ ಸಿಂಗಾರಿಸಲಾಗಿತು. ಶನಿವಾರ ದಂದು ಬೆಳಿಗ್ಗೆ 6.45 ಗಂಟೆಗೆ ಗಣಪತಿ ಹವನ 7.15 ಗಂಟೆಗೆ ಶುದ್ಧಿ ಪುಣ್ಯಾಹ ವಿಶೇಷ ಪೂಜೆಯನ್ನು ಶ್ರೀ ಚಾಮುಂಡೇಶ್ವರಿ ದೇವಾಲಯದ ಆರ್ಚಕ ಮಂಜುನಾಥ ಉಡುಪ ಅವರು ನೇರವೇರಿಸುವ ಮೂಲಕ 7.30 ಗಂಟೆಗೆ ಬಾವುಟವನ್ನು ಏರಿಸುವುದರೊಂದಿಗೆ ಶ್ರೀ ಚಾಮುಂಡೇಶ್ವರಿ, ಶ್ರೀ ಮುತ್ತಪ್ಪ ಮತ್ತು ಪರಿವಾರ ದೇವರುಗಳ ತೆರೆ ಮಹೋತ್ಸವಕ್ಕೆ ವಿಧ್ಯುಕ್ತ ಚಾಲನೆ ನೀಡಿದರು. ಸಂಜೆ 4 ಗಂಟೆಗೆ ಶ್ರೀ ಮುತ್ತಪ್ಪ ದೇವರ ಮಲೆ ಇಳಿಸುವಿಕೆ, ರಾತ್ರಿ 6 ಗಂಟೆಗೆ ಚಂಡೆಮೇಳ, 7. ಗಂಟೆಗೆ ಶ್ರೀ ಮುತ್ತಪ್ಪ ವೆಳ್ಳಾಟಂ ನಡೆಯಿತು.
ಭಾನುವಾರ ಬೆಳಗ್ಗೆ 7 ಗಂಟೆಗೆ ವಾದ್ಯಮೇಳ, 11 ಗಂಟೆಗೆ ಶ್ರೀ ಶಾಸ್ತಪ್ಪನ ವೆಳಾಳಟಂ,ಮಧ್ಯಾಹ್ನ 1 ಗಂಟೆಗೆ ಶ್ರೀ ಗುಳಿಗವೆಳ್ಳಾಟಂ, ಸಂಜೆ 4 ಗಂಟೆಗೆ ಅಡಿಯರ ವಿದ್ಯುತ್ ದೀಪಾಲಂಕೃತ ಭವ್ಯ ಮಂಟಪದಲ್ಲಿ ಶ್ರೀ ಮುತ್ತಪ್ಪ ಹಾಗೂ ತಿರುವಪ್ಪ ಮೂರ್ತಿಗಳನ್ನು ಇರಿಸಿ ಪಟ್ಟಣದ ಮುಖ್ಯ ಬೀದಿಗಳಲ್ಲಿ ಚಂಡೆಯೊಂದಿಗೆ ಮೆರವಣಿಗೆಯು ಸಾಗಿತು. ರಾತ್ರಿ 7 ಗಂಟೆಗೆ ಶ್ರೀ ಮುತ್ತಪ್ಪ ವೆಳ್ಳಾಟಂ, 8 ಗಂಟೆಗೆ ಶ್ರೀ ಚಾಮುಂಡೇಶ್ವರಿ ಮತ್ತು ಶ್ರೀ ರಕ್ತ ಚಾಮುಂಡಿ ವೆಳ್ಳಾಟಂ, 8.30 ಗಂಟೆಗೆ ಶ್ರೀ ವಸೂರಿಮಾಲೆ ಸ್ನಾನಕ್ಕೆ ಹೊರಡುವುದು, 9ಗಂಟೆಗೆ ವಿಷ್ಣುಮೂರ್ತಿ ವೆಳ್ಳಾಟಂ, 11 ಗಂಟೆಗೆ ಕಳಿಗ ಪಾಟ್ ಅಂದಿವೇಳ ಕಳಸಂ ಸ್ವೀಕರಿಸುವುದು, ವೆಳ್ಳಕಟ್ಟ್, 1-15ಕ್ಕೆ ಗುಳಿಗನ ಕೋಲ, 2 ಗಂಟೆಗೆ ಶಾಸ್ತಪ್ಪನ ಕೋಲ, ಬೆಳಗಿನ ಜಾವ 4 ಗಂಟೆಗೆ ಶ್ರೀ ಮುತ್ತಪ್ಪ ಮತ್ತು ಶ್ರೀ ತಿರುವಪ್ಪನ ಕೋಲ, 5 ಗಂಟೆಗೆ ಗಂಭೀರ ಪಟಾಕಿ ಸಿಡಿಸಲಾಯಿತು.
ಸೋಮವಾರ ಬೆಳಗ್ಗೆ 7 ಗಂಟೆಗೆ ಶ್ರೀ ರಕ್ತ ಚಾಮುಂಡಿಕೋಲ, 8 ಗಂಟೆಗೆ ಶ್ರೀ ಮುತ್ತಪ್ಪ ಮತ್ತು ಶ್ರೀ ತಿರುವಪ್ಪ ದೇವರ ಪಳ್ಳಿವೇಟ, 9ಗಂಟೆಗೆ ಶ್ರೀ ವಿಷ್ಣುಮೂರ್ತಿಕೋಲ, 10 ಗಂಟೆಗೆ ಶ್ರೀ ಚಾಮುಂಡೇಶ್ವರಿ ಕೋಲ, 11 ಗಂಟೆಗೆ ಶ್ರೀ ವಸೂರಿ ಮಾಲೆ ಕೋಲ, ಮಧ್ಯಾಹ್ನ 12 ಗಂಟೆಗೆ ಗುರುಶ್ರೀ ದರ್ಪಣ, ಮಧ್ಯಾಹ್ನ 2 ಗಂಟೆಗೆ ಬಾವುಟವನ್ನು ಇಳಿಸುವುದರೊಂದಿಗೆ ಶ್ರೀ ಚಾಮುಂಡೇಶ್ವರಿ, ಶ್ರೀ ಮುತ್ತಪ್ಪ ಮತ್ತು ಪರಿವಾರ ದೇವರುಗಳ ತೆರೆ ಮಹೋತ್ಸವವು ಸಂಪನ್ನಗೊಂಡಿತು.
ಸಮಿತಿಯ ಅಧ್ಯಕ್ಷ ಪಟ್ಟೆಮನೆ ಉದಯಕುಮಾರ್, ಉಪಾಧ್ಯಕ್ಷ ಯಂಕನ ಶ್ರೀರಾಮ್, ಬಿ.ಡಿ.ರಾಜುರೈ, ಎನ್.ಆರ್.ಶಶಿಕುಮಾರ್, ಪ್ರಧಾನ ಕಾರ್ಯದರ್ಶಿ ಪಿ.ಸಿ.ಮೋಹನ್, ಖಜಾಂಜಿ ರಮೇಶ್‌ಪಿಳ್ಳೆ, ಸಹಕಾರ್ಯದರ್ಶಿ ಯಂಕನ ಕೌಶಿಕ್, ಕಾರ್ಯಕಾರಿ ಸಮಿತಿ ಸದಸ್ಯರು ಚಂದ್ರ, ಪ್ರವೀಣ, ದಿವಾಕರ ರೈ, ವಿನೋದ್, ಪ್ರಾಂತ್, ಎ.ಲೋಕೇಶ್ ಕುಮಾರ್, ರಾಮಮೂರ್ತಿ, ಪಳನಿ, ವೀಣಾರೈ, ಗಿರೀಜಾ ಉದಯಕುಮಾರ್ ಹಾಗೂ ರಮ್ಯ ಮೋಹನ್, ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು.