ಗುಳ್ಳದ ಮನೆ ಶ್ರೀ ಗಿರಿಸಿದ್ದೇಶ್ವರ ಸ್ವಾಮಿ ಉತ್ಸವ ನಡೆಯಿತು.  
ಜಿಲ್ಲೆ

ಶ್ರೀ ಗಿರಿಸಿದ್ದೇಶ್ವರ ಸ್ವಾಮಿ ಬ್ರಹ್ಮರಥೋತ್ಸವ

ಲಿಂಗದಹಳ್ಳಿ: ಗುಳ್ಳದ ಮನೆ ಗ್ರಾಮ ದೇವರು ಶ್ರೀ ಗಿರಿಸಿದ್ದೇಶ್ವರ ಸ್ವಾಮಿ ಜಾತ್ರ ಮಹೋತ್ಸವ ಬುಧವಾರ ಕೆಂಡೋತ್ಸವ ನಡೆಸುವ ಮೂಲಕ ಸಂಪನ್ನವಾಯಿತು.

ಮೇ 3ರಂದು ಜಾತ್ರೆ ಆರಂಭಗೊಂಡಿತ್ತು. ಮಂಗಳವಾರ ಮಧ್ಯಾಹ್ನ ಶ್ರೀ ಗಿರಿ ಸಿದ್ದೇಶ್ವರ ಸ್ವಾಮಿ ಬ್ರಹ್ಮ ರಥೋತ್ಸವ ನಡೆಯಿತು. ಭಕ್ತರು ಬ್ರಹ್ಮ ರಥಕ್ಕೆ ಬಾಳೆ ಹಣ್ಣು, ಹೂವು, ಮುಂತಾದ ಮಂಗಳ ದ್ರವ್ಯಗಳನ್ನು ಎಸೆಯುವ ಮೂಲಕ ಹರಕೆ ತೀರಿಸಿದರು. ಬುಧವಾರ ಬೆಳಗ್ಗೆ ಕೆಂಡದ ಗುಂಡಿ ಬಾವುಟದ ಹಾರಾಜು ಪ್ರಕ್ರಿಯೆಯೊಂದಿಗೆ ಹುಲಿ ವಾಹನದೊಂದಿಗೆ ನಡೆದ ಶ್ರೀ ಗಿರಿಸಿದ್ದೇಶ್ವರ ಸ್ವಾಮಿಯ ಕೆಂಡಾರ್ಚನೆ, ಬಾಗಿಲು ತಡೆಯುವ ಶಾಸ್ತ್ರದೊಂದಿಗೆ ಶ್ರೀ ಸ್ವಾಮಿಗೆ ಮಹಾ ಮಂಗಳಾರತಿ ಮಾಡಿ ಭಕ್ತಾಧಿಗಳಿಗೆ ತೀರ್ಥ ಪ್ರಸಾದ ವಿನಿಯೋಗ ಮಾಡಲಾಯಿತು.

ಶ್ರೀ ಗಿರಿಸಿದ್ದೇಶ್ವರ ಸ್ವಾಮಿ ಎಂದೇ ಭಾವಿಸಿರುವ ಭಕ್ತಾದಿಗಳು ಪೂಜೆ ಸಲ್ಲಿಸುವ ಶ್ರೀ ದೇವರ ಬೆಳ್ಳಿ ಬಾವುಟದ ಬಹಿರಂಗ ಹರಾಜು ಪ್ರಕ್ರಿಯೆಯಲ್ಲಿ ಕಡೂರಿನ ಶ್ರೀ ಕೃಷ್ಣ ಟಿಂಬರ್ಸ್‌ ಮಾಲೀಕ ಗುಳ್ಳದ ಮನೆ ಗೋಪಾಲಕೃಷ್ಣ ಮತ್ತು ಕುಟುಂಬಸ್ಥರು 2.10 ಲಕ್ಷ ರೂಪಾಯಿಗೆ ಹರಾಜು ಕೂಗುವ ಮೂಲಕ ಬೆಳ್ಳಿ ಬಾವುಟವನ್ನು ಮುಂದಿನ ಒಂದು ವರ್ಷದ ಅವಧಿಯವರೆಗೆ ಮನೆಯಲ್ಲಿಟ್ಟು ಪೂಜೆ ಸಲ್ಲಿಸುವ ಅವಕಾಶ ಪಡೆದುಕೊಂಡರು.