ಚಿತ್ರದುರ್ಗ: ನಮ್ಮ ಎಸ್‌ಆರ್‌ಎಸ್ ಹೆರಿಟೇಜ್ ಶಾಲೆ ಬ್ಲ್ಯೂಜೆಮ್ಸ್ ವಿಭಾಗದಲ್ಲಿ ಸೋಮವಾರ ಸಂಸ್ಥೆ ಆವರಣದಲ್ಲಿ ಏರ್ಪಡಿಸಿದ್ದ ಶ್ರೀಕೃಷ್ಣ ಜನ್ಮಾಷ್ಟ ಮಿ ಕಾರ‌್ಯಕ್ರಮವನ್ನು ತಹಸೀಲ್ದಾರ್ ಡಾ.ನಾಗವೇಣಿ ಉದ್ಘಾಟಿಸಿದರು. ಎಸ್‌ಆರ್‌ಎಸ್ ಶಿಕ್ಷಣ ಸಮೂಹ ಸಂಸ್ಥೆಗಳ ಮಾರ್ಗದರ್ಶಕಿ ಡಾ. ಆಶ್ರೀತಾಕಿರಣ್ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಕೃಷ್ಣನ 24 ಅವತಾರಗಳ ವೇಷಗಳೊಂದಿಗೆ ಚಿಣ್ಣರು ಕಂಗೊಳಿಸಿದರು.
ಮಕ್ಕಳ ಪಾಲಕರ ಪೈಕಿ ಹಲವರು ರಾಧೆ,ರುಕ್ಮಿಣಿ,ಮೀರಾ,ಬಲರಾಮ,ಕಂಸ,ಶೇಷನಾಗ,ದೇವಕಿ,ಯಶೋಧೆ ವೇಷಧಾರಿಗಳಾಗಿ ಸಂಭ್ರ ಮಿಸಿದರು. ನಾಗವೇಣಿ ಅವರು ಮಾತನಾಡಿ,ಎಲ್ಲರ ಮೇಲೂ ಶ್ರೀಕೃಷ್ಣನ ಕೃಪೆ ಇರಲಿ. ಎಂಥದ್ದೇ ಕಷ್ಟ,ಸವಾಲುಗಳು ಎದುರಾದರೂ ಅ ವುಗಳನ್ನು ಧೈರ್ಯದಿಂದ ಎದುರಿಸಿ ಗೆಲ್ಲುವ ಶಕ್ತಿಯನ್ನು ಶ್ರೀಕೃಷ್ಣ ಕೊಡಲಿ ಎಂದು ಹಾರೈಸಿದರು. ಸಂಸ್ಥೆ ಆಡಳಿತಾಧಿಕಾರಿ ಡಾ.ಟಿ.ಎಸ್. ರವಿ,ಪ್ರಾಂಶುಪಾಲರಾದ ಎಂ.ಎಸ್.ಪ್ರಭಾಕರ್,ಎಂ.ಎಸ್.ಅರ್ಪಿತಾ,ಬ್ಲ್ಯೂಜೆಮ್ಸ್ ಶೈಕಣಿಕ ಸಂಯೋಜಕಿ ಸುಷ್ಮಾ ಬೋಧಕ,ಬೋಧಕೇ ತರ ಸಿಬ್ಬಂದಿ ಇದ್ದರು.