ಕಳಸ ಕಲಶೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಧ್ವಜಾರೋಹಣ ನಡೆಯಿತು.  
ಜಿಲ್ಲೆ

ಶ್ರೀ ಕಲಶೇಶ್ವರ ಸ್ವಾಮಿ ಜಾತ್ರೆ

ಎಸ್.ಎನ್.ರವೀಂದ್ರ

ಕಳಸ: ಶ್ರೀ ಕಲಶೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಅಂಗವಾಗಿ ದೇವಸ್ಥಾನದಲ್ಲಿ ಮಂಗಳವಾರ ಧ್ವಜಾರೋಹಣ ನಡೆಯಿತು.

ಸೋಮವಾರ ಗಣಪತಿ ಪೂಜೆ ಅಂಕುರಾರ್ಪಣದೊಂದಿಗೆ ಪ್ರಾರಂಭಗೊಂಡ ಜಾತ್ರಾ ಮಹೋತ್ಸವದಲ್ಲಿ ಮಂಗಳವಾರ ಧ್ವಜಾರೋಹಣ ನಡೆಸಲಾಯಿತು. ದೇವರಲ್ಲಿ ವಿಶೇಷ ಪ್ರಾರ್ಥನೆ ನಂತರ ಧ್ವಜಾಧಿವಾಸ ಹೋಮ, ಧ್ವಜ ಸ್ತಂಭಕ್ಕೆ ವಿಧಿವಿಧಾನ ನೆರವೇರಿಸಲಾಯಿತು. ಮಹಾಪೂಜೆಯೂ ನೆರವೇರಿತು. ರಾತ್ರಿ ಭಕ್ತರಿಂದ ಹಸಿರುವಾಣಿ ಸಮರ್ಪಣೆ ನಡೆದು ಕೌತುಕೋತ್ಸವ ವೃಷಭಾರೋಹಣ ನಡೆಯಿತು. ಒಂಬತ್ತು ದಿನಗಳ ಕಾಲ ಇಲ್ಲಿ ನಡೆಯುವ ಜಾತ್ರಾ ಮಹೋತ್ಸವದಲ್ಲಿ ಫೆ.9ರಂದು ರಥೋತ್ಸವ ನಡೆಯಲಿದೆ.