ಅರಕೆರೆ ವಿರಕ್ತ ಮಠದ ಆವರಣದಲ್ಲಿ ಶ್ರೀ ಕರಿಸಿದ್ದೇಶ್ವರ ಶ್ರೀಗಳನ್ನು ಕ್ರಿಯಾಸಮಾ ಮಾಡಲಾಯಿತು. 
ಜಿಲ್ಲೆ

ಶ್ರೀ ಕರಿಸಿದ್ದೇಶ್ವರ ಸ್ವಾಮೀಜಿ ಅಂತ್ಯಕ್ರಿಯೆ

ಹೊಳೆಹೊನ್ನೂರು: ಅರಕೆರೆಯ ವಿರಕ್ತಮಠದ ಶ್ರೀ ಕರಿಸಿದ್ದೇಶ್ವರ ಸ್ವಾಮೀಜಿ ಅಂತ್ಯಕ್ರಿಯೆ ವೀರಶೈವ ಲಿಂಗಾಯತ ಧರ್ಮದ ಪದ್ಧತಿಯಂತೆ ಮಠದ ಆವರಣದಲ್ಲಿ ಸೋಮವಾರ ನೆರವೇರಿತು.

ಅರಕೆರೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಪಾರ್ಥಿವ ಶರೀರದ ಮೆರವಣಿಗೆ ನಡೆಸಲಾಯಿತು. ಮಹಾ ಸಂಕಲ್ಪದೊಂದಿಗೆ ಗಣಪತಿ ಪೂಜೆ, ಪುಣ್ಯಾಹ ನಾಂದಿ, ಪಂಚಕಳಸ, ಪಾದಪೂಜೆಯೊಂದಿಗೆ ಅಂತ್ಯಕ್ರಿಯೆಯ ವಿಗಳನ್ನು ನೆರವೇರಿಸಲಾಯಿತು. ಕರಿಸಿದ್ದೇಶ್ವರ ಶ್ರೀಗಳ ಪಾರ್ಥಿವ ಶರೀರವನ್ನು ಶ್ರೀ ಚನ್ನವೀರ ಸ್ವಾಮಿಗಳ ವಿರಕ್ತ ಮಠದ ಆವರಣದಲ್ಲಿ ಕ್ರಿಯಾಸಮಾ ಮಾಡಲಾಯಿತು.

25 ವರ್ಷಗಳ ಹಿಂದೆ ಬಿಳಕಿಯ ರಾಚೋಟೇಶ್ವರ ಶ್ರೀಗಳ ಅನುಗ್ರಹದಿಂದ ಕರಿಸಿದ್ದೇಶ್ವರ ಸ್ವಾಮೀಜಿ ಸನ್ಯಾಸ ದೀಕ್ಷೆ ಸ್ವೀಕರಿಸಿದರು. ಸುತ್ತಮುತ್ತಲಿನ ಹಳ್ಳಿಗಳ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಮುಂಚೂಣಿಯಲ್ಲಿದ್ದು, ಕಳೆದ ವರ್ಷ ಅರಕೆರೆಯಲ್ಲಿ ನೂತನ ಮಠ ಲೋಕಾರ್ಪಣೆ ಗೊಳಿಸಿದ್ದರು. ಶ್ರೀಗಳ ಅಂತ್ಯಸಂಸ್ಕಾರದಲ್ಲಿ ಶ್ರೀ ಸಿದ್ದರಾಮ ದೇಶಿಕೇಂದ್ರ ಸ್ವಾಮೀಜಿ, ರಟ್ಟಿಹಳ್ಳಿ ಕಬ್ಬಿಣ ಕಂತಿ ಮಠದ ಶಿವಲಿಂಗಾ ಶಿವಾಚಾರ್ಯ ಸ್ವಾಮೀಜಿ, ಬಿಳಕಿ ಶ್ರೀ ರಾಚೋಟೇಶ್ವರ ಸ್ವಾಮೀಜಿ, ಶ್ರೀಪತಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ತಾವರೆಕೆರೆ ಅಭಿನವ ಸಿದ್ದಲಿಂಗ ಶಿವಾಚಾರ್ಯರು, ಚನ್ನಗಿರಿ ಕೇದಾರ ಶಿವಶಾಂತವೀರ ಶಿವಾಚಾರ್ಯರು, ಹಾರ‌್ನಳ್ಳಿ ಶ್ರೀ ರಾಮಲಿಂಗೇಶ್ವರ ಮಠದ ಶಿವಯೋಗಿ ಶಿವಾಚಾರ್ಯರು, ಮುಖಂಡರಾದ ಎಚ್.ಎಲ್.ಷಡಾಕ್ಷರಿ, ಬಿ.ಕೆ.ಮೋಹನ್ ಮತ್ತಿತರರು ಭಾಗವಹಿಸಿದ್ದರು.