ಮಳೆದೇವರು ಖ್ಯಾತಿಯ ಕಿಗ್ಗಾ ಶ್ರೀ ಋಷ್ಯಶೃಂಗೇಶ್ವರ ಸ್ವಾಮಿ ರಥೋತ್ಸವ ವಿಜೃಂಭಣೆಯಿಂದ ನಡೆಯಿತು. 
ಜಿಲ್ಲೆ

ಶ್ರೀ ಋಷ್ಯಶೃಂಗೇಶ್ವರ ಸ್ವಾಮಿ ರಥೋತ್ಸವ

ಶೃಂಗೇರಿ: ಮಳೆ ದೇವರು ಎಂದೇ ಪ್ರಖ್ಯಾತಗೊಂಡಿರುವ ಕಿಗ್ಗಾ ಶ್ರೀ ಋಷ್ಯಶೃಂಗೇಶ್ವರ ಸ್ವಾಮಿ ರಥೋತ್ಸವ ಶನಿವಾರ ವಿಜೃಂಭಣೆಯಿಂದ ನಡೆಯಿತು.

ರಥೋತ್ಸವ ಪ್ರಯುಕ್ತ ಹಲವು ಧಾರ್ಮಿಕ ವಿಧಿ ವಿಧಾನಗಳು ನೆರವೇರಿದವು. ಮಾ.31ರಂದು ಜಾತ್ರಾ ಧ್ವಜಾರೋಹಣ ನಡೆದಿದ್ದು, ಬೆಳಗ್ಗೆ ಸಾಲಂಕೃತಗೊಂಡ ರಥವನ್ನು ಕೊಂಚ ದೂರದ ತನಕ ಎಳೆಯಲಾಯಿತು.ರಥೋತ್ಸವಕ್ಕೆ ರಂಗವಲ್ಲಿಯ ಚಿತ್ತಾರಗಳು, ಛತ್ರಿ-ಚಾಮರಗಳು, ವಾದ್ಯಗೋಷ್ಠಿಗಳು, ತಳಿರು ತೋರಣಗಳು ಮೆರುಗು ನೀಡಿದವು. ಸಂಜೆ ಮುಖ್ಯಬೀದಿಯಲ್ಲಿ ಮತ್ತೆ ರಥವನ್ನು ಎಳೆದು ಉತ್ಸವಮೂರ್ತಿಯನ್ನು ದೇವಾಲಯಕ್ಕೆ ಕೊಂಡೊಯ್ಯಲಾಯಿತು. ಹೊರ ಪ್ರಾಂತ್ಯಗಳಲ್ಲಿ ನೆಲೆಸಿರುವ ಭಕ್ತರು ಹಾಗೂ ಸ್ಥಳೀಯರು ಶ್ರದ್ಧಾಭಕ್ತಿಯಿಂದ ರಥೋತ್ಸವದಲ್ಲಿ ಭಾಗಿಯಾದರು.