ಚಿಕ್ಕಮಗಳೂರಿನ ಬೋಳರಾಮೇಶ್ವರ ದೇವಸ್ಥಾನದ ಆವರಣದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ ಪೂಜಾ ಸಮಿತಿಯಿಂದ ಆಯೋಜಿಸಿದ್ದ ೫೧ನೇ ವರ್ಷದ ವಾರ್ಷಿಕ ದೀಪೋತ್ಸವ ಕಾರ್ಯಕ್ರಮದ ಮೆರವಣಿಗೆ ಅದ್ಧೂರಿಯಾಗಿ ನಗರದಲ್ಲಿ ನಡೆಯಿತು. 
ಜಿಲ್ಲೆ

ಶ್ರೀ ಅಯ್ಯಪ್ಪ ಸ್ವಾಮಿ ಮೆರವಣಿಗೆ

ಚಿಕ್ಕಮಗಳೂರು: ನಗರದ ಬೋಳರಾಮೇಶ್ವರ ದೇವಸ್ಥಾನದ ಆವರಣದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ ಪೂಜಾ ಸಮಿತಿಯಿಂದ ಆಯೋಜಿಸಿದ್ದ ೫೧ನೇ ವರ್ಷದ ವಾರ್ಷಿಕ ದೀಪೋತ್ಸವ ಕಾರ್ಯಕ್ರಮದ ಮೆರವಣಿಗೆ ಅದ್ಧೂರಿಯಾಗಿ ನಗರದಲ್ಲಿ ನಡೆಯಿತು.

ನಗರದ ಬೋಳರಾಮೇಶ್ವರ ದೇವಾಲದಿಂದ ಅಯ್ಯಪ್ಪ ಸ್ವಾಮಿಯನ್ನು ಅಲಂಕೃತವಾದ ರಥದ ಮೇಲೆ ಕುಳ್ಳಿರಿಸಿ ನಗರದ ಪ್ರಮುಖ ರಾಜಬೀದಿಗಳಲ್ಲಿ ತಾಲಿಪ್ರೋಲಿ, ಚಂಡೆ, ನಾದಸ್ವರ ವಾದನ, ಪಾಂಡಿಮೇಳ, ತಾಯಂಬಕ, ಸಿಂಗಾರಿ ಮೇಳ, ಪಂಚವಾದ್ಯದೊAದಿಗೆ ಮೆರವಣಿಗೆ ಮಾಡಲಾಯಿತು.

ಈ ಸಂದರ್ಭದಲ್ಲಿ ಪೂಜಾ ಸಮಿತಿಯ ಅಧ್ಯಕ್ಷ ನಾರಾಯಣಗೌಡ, ಗೌರವಾಧ್ಯಕ್ಷ ದಿನೇಶ್ ಪೊದುವಾಳ್, ರವಿಶಂಕರ್, ಪ್ರಧಾನ ಕಾರ್ಯದರ್ಶಿ ಅಶೋಕ್ ಸಚ್ಚಿದೇವ್, ಖಜಾಂಚಿ ಜೀವನ್.ಕೆ.ಶೆಟ್ಟಿ, ಉಪಾಧ್ಯಕ್ಷರಾದ ಸಾರಥಿ ಮಂಜುನಾಥ್, ವೆಂಕಟೇಶ್, ಅಣ್ಣಯ್ಯ, ಮಹಾದೇವ್, ಕಾರ್ಯದರ್ಶಿಗಳಾದ ಉಮೇಶ್, ಲಕ್ಷ್ಮೀಕಾಂತ್, ಕೋಟೆ ನಟರಾಜ್, ದಿಲೀಪ್‌ರಾಜ್, ಸತೀಶ್, ಸಹಕಾರ್ಯದರ್ಶಿಗಳಾದ ಚೆನ್ನಕೇಶವ, ಮನೋಹರ್, ಜವರಪ್ಪ, ಯಶ್ವಂತ್, ಎಸ್.ಡಿ.ಎಂ ಮಂಜು, ರಾಜುಶೆಟ್ಟಿ, ಚೇತನ್, ರಂಗನಾಥ್, ಪ್ರಶಾಂತ್, ಮಹಾದೇವ, ಕಿರಣ್, ಮುಖೇಶ್‌ಸಿಂಗ್, ಸದಾಶಿವ ಗುರುಸ್ವಾಮಿ, ಕಿರಣ್, ರಾಮಚಂದ್ರ ಉಪಸ್ಥಿತರಿದ್ದರು.