ಶಿರಸಿ: 500 ವರ್ಷ ಇತಿಹಾಸವಿರುವ ತಾಲೂಕಿನ ತುಡಗುಣಿಯ ಶ್ರೀಸಿದ್ಧಿವಿನಾಯಕ ದೇವಾಲಯದ ನೂತನ ಕಟ್ಟಡ ಲೋಕಾರ್ಪಣೆ ಹಾಗೂ ದೇವರ ಪ್ರತಿಷ್ಠಾ ಮಹೋತ್ಸವವು ದೀವಗಿ ಮಠದ ಶ್ರೀ ರಾಮಾನಂದರ ಸಾನ್ನಿಧ್ಯದಲ್ಲಿ ಭಾನುವಾರ ನೆರವೇರಿತು.
ಶನಿವಾರದಂದು ಪ್ರತಿಷ್ಠಾ ಮಹೋತ್ಸವದ ಪೂರ್ವ ಗಣೇಶ ಯಾಗ, ರಾಕ್ಷೋಘ್ನವಾಸ್ತು ಹೋಮ, ವಾಸ್ತು ಬಲಿ ಸೇರಿದಂತೆ ವಿವಿಧ ಧಾರ್ವಿುಕ ಕಾರ್ಯಕ್ರಮಗಳು ನಡೆದವು. ಭಾನುವಾರ ಬೆಳಗ್ಗೆ ನವಗ್ರಹಹವನಾದಿ ಪ್ರತಿಷ್ಠಾಂತಿ ಹೋಮಗಳು, ಶಿಖರಪ್ರತಿಷ್ಠೆ, ಕಲಾಪ್ರಾಣಪ್ರತಿಷ್ಠಾದಿ ಹೋಮಗಳು ನೆರವೇರಿದವು. ಬೆಳಗ್ಗೆ 10.48ಕ್ಕೆ ದೇವರ ಪ್ರತಿಷ್ಠಾ ಮಹೋತ್ಸವವನ್ನು ದೀವಗಿ ಮಠದ ಶ್ರೀರಾಮಾನಂದರು ನೆರವೇರಿಸಿದರು.
ಈ ವೇಳೆ ದೇವಾಲಯ ಆಡಳಿತ ಮಂಡಳಿ ಅಧ್ಯಕ್ಷ ಎಂ.ವಿ.ಹೆಗಡೆ ಭತ್ತಗುತ್ತಿಗೆ, ಪ್ರಮುಖರಾದ ಶಿವಾನಂದ ಹೆಗಡೆ, ಗಣಪತಿ ಭಟ್ಟ, ವಿಶ್ವನಾಥ ಶರ್ಮ, ಶ್ರೀಧರ ಭಟ್ಟ, ಲಕ್ಷ್ಮೀಕಾಂತ ಭಟ್ಟ, ಗಜಾನನ ಹೆಗಡೆ, ಮಹಾಬಲೇಶ್ವರ ಭಟ್ಟ, ನಾಗಪತಿ ಹೆಗಡೆ, ಎಂ.ಎಲ್.ಹೆಗಡೆ ಇದ್ದರು.