ಮೂಡಿಗೆರೆಯಲ್ಲಿ ಕಸಾಪ ಏರ್ಪಡಿಸಿದ್ದ ಶ್ರಾವಣ ಸಂಜೆ ಕಾರ್ಯಕ್ರಮದಲ್ಲಿ ನಿರ್ಮಲಾ ಮಂಚೇಗೌಡ ಮಾತನಾಡಿದರು. ಡಿ.ಕೆ.ಲಕ್ಷ್ಮಣ್‌ಗೌಡ, ನವೀನ್ ಇದ್ದರು. 
ಜಿಲ್ಲೆ

ಶ್ರಾವಣ ಮಾಸದಿಂದ ಪ್ರಕೃತಿಯಲ್ಲಿ ಬದಲಾವಣೆ

ಮೂಡಿಗೆರೆ: ಶ್ರಾವಣ ಮಾಸದಿಂದ ಪ್ರಕೃತಿಯಲ್ಲಿ ಬದಲಾವಣೆ ಪರ್ವ ಪ್ರಾರಂಭವಾಗುತ್ತದೆ. ಇದು ಮಹಿಳೆಯರಿಗೆ ವಿಶೇಷ ಸಂಭ್ರಮದ ತಿಂಗಳಾಗಿದೆ ಎಂದು ಕಸಾಪ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ನಿರ್ಮಲಾ ಮಂಚೇಗೌಡ ಹೇಳಿದರು.

ಮಂಗಳವಾರ ಮೇಗಲಪೇಟೆ ಪುನರ್ವಿ ನಿಲಯದಲ್ಲಿ ಶ್ರಾವಣ ಸಂಜೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಈ ಬಾರಿ ತಾಲೂಕಿನಲ್ಲಿ ಹೆಚ್ಚು ಮಳೆಯಾಗಿದ್ದರಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಇದೀಗ ಮಳೆ ಆರ್ಭಟ ಕ್ಷೀಣಿಸಿದ್ದು, ಈ ವರ್ಷದ ಶ್ರಾವಣ ಮಾಸದಲ್ಲಿ ಆರಂಭಗೊಳ್ಳುವ ಎಲ್ಲ ಹಬ್ಬಗಳನ್ನು ವಿಶೇಷವಾಗಿ ಸಂಭ್ರಮಿಸಬೇಕು ಎಂದು ಹೇಳಿದರು.

ಕಸಾಪ ತಾಲೂಕು ಅಧ್ಯಕ್ಷ ಡಿ.ಕೆ.ಲಕ್ಷ್ಮಣ್‌ಗೌಡ ಮಾತನಾಡಿ, ಪ್ರಕೃತಿಯೇ ನಮಗೆ ಜೀವನ ಪಾಠ ಕಲಿಸುತ್ತದೆ. ಅದನ್ನು ಮನಗೊಂಡು ನಮ್ಮಲ್ಲಿರುವ ಸ್ವಾರ್ಥ ಮನೋಭಾವ ಬಿಟ್ಟು ಎಲ್ಲರೂ ಸಹಬಾಳ್ವೆಯಿಂದ ಜೀವನ ಸಾಗಿಸಬೇಕು ಎಂದು ಹೇಳಿದರು.

ಕಸಾಪ ಸಾಂಸ್ಕೃತಿಕ ಕಾರ್ಯದರ್ಶಿ ನವೀನ್ ಆನೆದಿಬ್ಬ , ಕಸಾಪ ಜಿಲ್ಲಾ ಸಮಿತಿ ಸದಸ್ಯ ಎಚ್.ಎಂ.ಶಾಂತಕುಮಾರ್, ತಾಲೂಕು ಪ್ರಧಾನ ಕಾರ್ಯದರ್ಶಿ ಸುಚಿತ್ರಾ ಪ್ರಸನ್ನ, ಪ್ರಕಾಶ್ ಬಕ್ಕಿ, ಲೋಕೇಶ್, ಬಾಳೂರು, ಸೋಮೇಶ್ ಗೌಡ, ಅಂಬಾವತಿ, ಹರಿಣಾಕ್ಷಿ, ಪವನಾ ವಿಜಯ್, ಇಂಪಾ ಸವಿನ್, ಮಂಜುನಾಥ್, ವಿಜಯಲಕ್ಷ್ಮೀ, ಕಮಲಾ ಸತೀಶ್, ಚಂದ್ರು ಒಡೆಯಾರ್, ಅನಿತಾ ಜಗದೀಪ್, ರೇಖಾ ರವಿರಾಜ್, ವಿನೋದ್ ಬಿದರಹಳ್ಳಿ ಮತ್ತಿತರರಿದ್ದರು.