ಶಹಾಪುರದ ನಂದಗೋಕುಲ ಪದವಿ ಮಹಾವಿದ್ಯಾಲಯದಲ್ಲಿ ಸೋಮವಾರ ಏರ್ಪಡಿಸಿದ್ದ ಶ್ರಾವಣ ಸಂಭ್ರಮ ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನ ಮುದ್ನೂರ ಮಾತನಾಡಿದರು. 
ಜಿಲ್ಲೆ

ಶ್ರಾವಣ ನವಚೈತನ್ಯ ತುಂಬುವ ಪರ್ವಕಾಲ

ಹರೀಶ ಕುಲಕರ್ಣಿ

ಶಹಾಪುರ: ಶ್ರಾವಣ ಎಂಬ ಹೆಸರೇ ನವೋಲ್ಲಾಸ ತರುವಂತಹದ್ದು. ಬೇಸಿಗೆಯ ಬಿಸಿಲಲಿ ಬೆಂದು ಮಳೆಗಾಲ ಆರಂಭವಾಗಿ ಹಸಿರು ಹೊತ್ತ ್ತ ಬೆಟ್ಟ ಗುಡ್ಡಗಳಿಂದ ನಳನಳಿಸುವ ವಾತಾವಾರಣ ಇರುವುದು ಈ ಪವಿತ್ರ ಶ್ರಾವಣ ಮಾಸದಲ್ಲಿ ಎಂದು ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಮುದ್ನೂರ ಹೇಳಿದರು.

ನಗರದ ನಂದಗೋಕುಲ ಪದವಿ ಮಹಾವಿದ್ಯಾಲಯದಲ್ಲಿ ಚಿರಂಜೀವಿ ಸಾಂಸ್ಕೃತಿಕ ಸಾಮಾಜಿಕ ಕಲಾ ಸಂಸ್ಥೆ(ರಿ) ಸೋಮವಾರ ಏರ್ಪಡಿಸಿದ್ದ ಶ್ರಾವಣ ಸಂಭ್ರಮ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕವಿ ದ.ರಾ.ಬೇಂದ್ರೆ ಅವರ ಶ್ರಾವಣ ಬಂತು ಕಾಡಿಗೆ, ಬಂತು ನಾಡಿಗೆ ಬಂತು ಬೀಡಿಗೆ ಎಂಬ ಕಾವ್ಯದಂತೆ ಈ ಮಾಸ ನವಚೈತನ್ಯ ತುಂಬುವ ಪರ್ವಕಾಲ ಎಂದರು.

ಸಾನ್ನಿಧ್ಯ ವಹಿಸಿದ್ದ, ನಾಗನಟಗಿಯ ಶ್ರೀ ಸಿದ್ರಾಮಯ್ಯ ಸ್ವಾಮೀಜಿ ಆಶೀರ್ವಚನ ನೀಡಿದರು. ಕಾರ್ಯಕ್ರಮವನ್ನು ಜಿಲ್ಲಾ ಸಹಕಾರಿ ಯೂನಿಯನ್ ಉಪಾಧ್ಯಕ್ಷ ಎಂ.ನಾರಾಯಣ ಉದ್ಘಾಟಿಸಿದರು. ಕಲಾ ಸಂಸ್ಥೆ ಅಧ್ಯಕ್ಷ ವೆಂಕಟೇಶ ಬೋನೇರ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲ ಮೊಹ್ಮದ್ ಇಮ್ರಾನ್ ಇದ್ದರು. ಕನ್ನಡಪರ ಹೋರಾಟಗಾರ ಮಲ್ಲಯ್ಯ ಸ್ವಾಮಿ ಇಟಗಿ ನಿರೂಪಣೆ ಮಾಡಿ ವಂದಿಸಿದರು.