ಜಿಲ್ಲೆ

ಶ್ರಾವಣ ಆಚರಿಸುವವರು ದೈವಿ ಭಕ್ತರು

ಯಾದಗಿರಿ: ಶ್ರಾವಣ ಮಾಸ ತಿಂಗಳು ಧಾರ್ಮಿಕ ಪರಂಪರೆಯಿAದ ಕೂಡಿದ್ದು, ಶ್ರಾವಣ ಆಚರಣೆ ಮಾಡುವವರು ದೈವಿ ಭಕ್ತರಾಗುತ್ತಾರೆ ಎಂದು ಡಾ.ಗಂಗಾಧರ ಸ್ವಾಮೀಜಿ ನುಡಿದರು.

ಅಬ್ಬೆತುಮಕೂರಿನ ವಿಶ್ವಾರಾಧ್ಯರ ಮಠದಲ್ಲಿ ಮಂಗಳವಾರ ಹಮ್ಮಿಕೊಂಡ ಶ್ರಾವಣ ಮಾಸ ನಿಮಿತ್ತ ತಿಂಗಳವರೆಗೂ ನಡೆದ ವಿಶೇಷ ಪೂಜೆಯ ಸಮಾರೋಪ ಮತ್ತು ಮೇತ್ರೆ ಕುಟುಂಬದವರ ಪಾದಪೂಜೆ ಕರ‍್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ವಿಶ್ವಾರಾಧ್ಯರು ತಮಗಾಗಿ ಇರದೆ, ಬೇಡಿ ಬಂದ ಭಕ್ತರ ಇಷ್ಟಾರ್ಥ ಈಡೇರಿಸುವ ದೇವರಾಗಿದ್ದಾರೆ. ಪ್ರತಿಯೊಬ್ಬರ ಜೀವನ ಸನ್ಮಾರ್ಗಕ್ಕಾಗಿ ಗುರುವಿನ ಆಶೀರ್ವಾದ ಬೇಕೇಬೇಕು. ಈ ನಿಟ್ಟಿನಲ್ಲಿ ಮಠದಲ್ಲಿ ಸದಾ ಕಾಲ ಭಕ್ತಿ ಪರಂಪರೆ ಮುಂದುವರಿಯಲಿದೆ ಎಂದರು.


ಮಾಜಿ ಸಚಿವ ಸಿದ್ದರಾಮ ಮೇತ್ರೆ ಕುಟುಂಬದಿAದ ವಿಶೇಷ ಪೂಜೆ ಹಾಗೂ ಶ್ರೀಗಳ ಪಾದಪೂಜೆ ನಡೆಯಿತು. ಬಸವರಾಜ ಶಾಸ್ತಿç, ಚನ್ನಪ್ಪಗೌಡ ಮೊಸಂಬಿ, ವಿಶ್ವನಾಥ ಸಿರವಾರ ಇತರರಿದ್ದರು.