ಬಾಗಲಕೋಟೆ: ವಿಶ್ವ ಶ್ರವಣ ದಿನಾಚರಣೆ ಅಂಗವಾಗಿ ಬದಲಾಗುತ್ತಿರುವ ಮನಸ್ಥಿತಿ, ಕಿವಿ ಮತ್ತು ಶ್ರವಣ ಆರೈಕೆ ಎಲ್ಲರಿಗೂ ವಾಸ್ತವವಾಗಿಸಿ, ನಿಮ್ಮನ್ನು ಸಶಕ್ತಗೊಳಿಸಿಕೊಳ್ಳಿ ಎಂಬ ಘೋಷವ್ಯಾಕ್ಯದೊಂದಿಗೆ ಹಮ್ಮಿಕೊಂಡಿರುವ ಜನ ಜಾಗೃತಿ ಜಾಥಾಕ್ಕೆ ಜಿಲ್ಲಾಽಕಾರಿ ಜಾನಕಿ ಕೆ.ಎಂ ಗುರುವಾರ ಚಾಲನೆ ನೀಡಿದರು.
ರಾಷ್ಟಿçÃಯ ಶ್ರವಣದೋಷ ನಿಯಂತ್ರಣ ಹಾಗೂ ನಿವಾರಣಾ ಕಾರ್ಯಕ್ರಮ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನಿಽðಷ್ಠತೆ ಮೀರಿ ಹೆಡ್‌ಪೋನ್‌ಗಳ ಬಳಕೆ ಮಾಡುತ್ತಿರುವದರಿಂದ ಕಿವಿಗಳಿಗೆ ಹಾನಿ ಉಂಟಾಗುತ್ತಿದೆ. ಅನಿವಾರ್ಯವಿದ್ದಾಗ ಮಾತ್ರ ಬಳಸುವುದು ಸೂಕ್ತ. ಹಾನಿಯಿಂದ ತಪ್ಪಿಸಿಕೊಳ್ಳಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಽಕಾರಿ ಡಾ.ಮಂಜುನಾಥ ಡಿ ಮಾತನಾಡಿ, ಇಂದು ೧೦೦ ರಲ್ಲಿ ಶೇ.೫ ರಷ್ಟು ಜನ ಕಿವುಡತನದಿಂದ ಬಳಲುತ್ತಿದ್ದಾರೆ. ಈ ಹಿಂದೆ ೭೦-೮೦ ವಯಸ್ಸಿನಲ್ಲಿಯೂ ಕಿವಿ ಚುರುಕಾಗಿರುತ್ತಿದ್ದವು. ಆದರೆ ಈಗ ೪೦-೫೦ ವರ್ಷಕ್ಕೆ ಕಿವುಡುತನ ಕಾಡುತ್ತಿದೆ. ಎಲ್ಲರೂ ಕಿವಿಯ ಆರೋಗ್ಯದ ಬಗ್ಗೆ ಹೆಚ್ಚಿನ ಜಾಗೃತಿ ವಹಿಸಬೇಕಿದೆ. ಈ ನಿಟ್ಟಿನಲ್ಲಿ ಪ್ರತಿ ವರ್ಷವು ವಿಶ್ವ ಶ್ರವಣ ದಿನಾಚರಣೆ ಆಚರಿಸಲಾಗುತ್ತಿದ್ದು, ಈ ದಿನಾಚರಣೆ ಅಂಗವಾಗಿ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಜಾಗೃತಿ ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಜಾಗೃತಿ ಜಾಥಾ ಜಿಲ್ಲಾಡಳಿತ ಭವನದಿಂದ ಪ್ರಾರಂಭವಾಗಿ ನಗರದ ನಾನಾ ಕಡೆಗಳಲ್ಲಿ ಸಂಚರಿಸಿ ಕೊನೆಗೆ ಜಿಲ್ಲಾ ಆಸ್ಪತ್ರೆಗೆ ಮುಕ್ತಾಯಗೊಂಡಿತು. ಜಾಥಾ ಮಾರ್ಗದಲ್ಲಿ ಜಾಗೃತಿ ಘೋಷವಾಕ್ಯಗಳನ್ನು ಕೂಗಲಾಯಿತು. ನಗರದ ಸಜ್ಜಲಶ್ರೀ ನರ್ಸಿಂಗ್ ಇನ್‌ಸ್ಟಿಟ್ಯೂಟ್, ಅರುಣೋದಯ ಪ್ಯಾರಾಮೆಡಿಕಲ್ ಕಾಲೇಜಿನ ಪ್ಯಾರಾ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಭಾಗವಹಿಸಿದ್ದರು.
ಜಾಥಾದಲ್ಲಿ ಜಿಲ್ಲಾ ಕುಟುಂಬ ಕಲ್ಯಾಣಾಽಕಾರಿ ಡಾ.ಅರವಿಂದ ಪಟ್ಟಣಶೆಟ್ಟಿ, ಜಿಲ್ಲಾ ಕ್ಷಯರೋಗ ನಿಯಂತ್ರಣಾಽಕಾರಿ ಡಾ.ಸುವರ್ಣ ಕುಲಕರ್ಣಿ, ಜಿಲ್ಲಾ ಕುಷ್ಟರೋಗ ನಿಯಂತ್ರಣಾಽಕಾರಿ ಎಸ್.ಸಿ.ಪಾಟೀಲ, ಜಿಲ್ಲಾ ಸಮೀಕ್ಷಣಾಽಕಾರಿ ಡಾ.ದಯಾನಂದ ಕರೇನ್ನವರ, ಜಿಲ್ಲಾ ಆರೋಗ್ಯ ಶಿಕ್ಷಣಾಽಕಾರಿ ಶಶಿಕಲಾ ಶಿನ್ನೂರ, ತಾಲೂಕಾ ಆರೋಗ್ಯಾಽಕಾರಿ ಸರಸ್ವತಿ ಮಾಗಿ, ಸಂಯೋಜಕ ಬಾಬುರೆಡ್ಡಿ ಕೆಂಗಲಗುತ್ತಿ ಇತರರು ಇದ್ದರು.