ಜಿಲ್ಲೆ

ಶ್ರವಣದೆಡೆ ಬೇಕಿದೆ ಅಗತ್ಯ ಜಾಗೃತಿ

ಚಿತ್ರದುರ್ಗ: ಶ್ರವಣ ಆರೋಗ್ಯದೆಡೆ ಜಾಗೃತಿ ಹಾಗೂ ಕಾಲ,ಕಾಲಕ್ಕೆ ಸ್ಕ್ರೀನಿಂಗ್ ಮಾಡಿಸುವಂತೆ ಎಎಸ್‌ಪಿ ಎಸ್.ಜೆ.ಕುಮಾರಸ್ವಾಮಿ ಪೊಲೀಸ್‌ಅಧಿಕಾರಿ ಸಿಬ್ಬಂ ದಿಗೆ ಸಲಹೆ ನೀಡಿದರು.

ಜಿಲ್ಲಾಪೊಲೀಸ್,ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆ,ಒರೆವಾ ಹಿಯರಿಂಗ್ ಸಲ್ಯೂಷನ್ ಸಂಯುಕ್ತಾಶ್ರಯದಲ್ಲಿ ನಗರದ ಬಡಾವಣೆ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ಜಿಲ್ಲೆಯ ಪೊಲೀಸ್ ಅಧಿಕಾರಿ,ಸಿಬ್ಬಂದಿಗೆ ಏರ್ಪಡಿಸಿದ್ದ ಶ್ರವಣ ಜಾಗೃತಿ ಮತ್ತು ಸ್ಕ್ರೀನಿಂಗ್ ಶಿಬಿರದಲ್ಲಿ ಮಾ ತನಾಡಿ,ದೈನಂದಿನ ಕರ್ತವ್ಯ ನಿರ್ವಹಣೆ ಸಮಯದಲ್ಲಿ ತಾವು ಶಬ್ಧ ಮಾಲಿನ್ಯದಿಂದ ಹೆಚ್ಚು ತೊಂದರೆ ಒಳಗಾಗುತ್ತಿದ್ದೀರಿ. ಶಬ್ಧಮಾಲಿನ್ಯವಿರುವ ಸ್ಥಳದಿಂದ ಸ್ವಲ್ಪ ಅಂತರದೊಂದಿಗೆ ಕರ್ತವ್ಯ ನಿರ್ವಹಿಸುವುದು ಹಾಗೂ ಕಿವಿಯ ಬಳಿ ಇಟ್ಟುಕೊಂಡು ಮೊಬೈಲ್‌ಪೋನ್ ಬಳಸುವುದನ್ನು ಕಡಿಮೆ ಮಾಡ ಬೇಕೆಂದರು.

ಶ್ರವಣ ಸಂರಕ್ಷಣಾ ಸಂಪನ್ಮೂಲ ವ್ಯಕ್ತಿ ನಿಸಾರ್‌ಅಹಮ್ಮದ್ ಮಾತನಾಡಿ,ಪ್ರಾಥಮಿಕ ಹಂತದಲ್ಲಿ ಶ್ರವಣ ದೋಷ ಪತ್ತೆ ಹಚ್ಚ ಬೇಕು. ಕಿವಿ ಕೆಳದಿರು ವ ಸಮಸ್ಯೆ ನಾನಾ ಕಾರಣಗಳಿಂದ ಬರುತ್ತದೆ. ಕಿವಿಯ ಒಳಭಾಗದಲ್ಲಿ ಗಾಯವಾದಾಗ,ವಯಸ್ಸಾದಂತೆ ಶ್ರವಣ ಸಂಬಂಧಿತ ಸಮಸ್ಯೆ ಕಂಡು ಬ ರುತ್ತಿದ್ದರೆ. ಆದ್ದರಿಂದ ಆಗಾಗ್ಗೆ ಶ್ರವಣ ತಪಾಸಣೆ ಮಾಡಿಸಿಕೊಳ್ಳ ಬೇಕೆಂದರು.

ರೆಡ್‌ಕ್ರಾಸ್ ಸಂಸ್ಥೆ ಅರುಣ್‌ಕುಮಾರ್,ಮಜಹರ್‌ಉಲ್ಲಾ,ಡಾ.ಮಧುಸೂದನ್‌ರೆಡ್ಡಿ,ಒರಿವಾ ಹಿಯರಿಂಗ್ ಸೆಲ್ಯೂಷನ್ ಬ್ರಾಂಚ್ ಹೆಡ್ ಫಾತಿಮಾ,ಪಿಐ ನಯೀಂ ಅಹಮದ್ ಮತ್ತಿತರರು ಇದ್ದರು.