ತಲ್ಲೂರ: ವೀರಭದ್ರೇಶ್ವರ ದೇವರಿಗೆ ಶ್ರದ್ಧೆ ಮತ್ತು ಭಕ್ತಿಯಿಂದ ನಡೆದುಕೊಂಡರೆ ನೆಮ್ಮದಿ ಜೀವನ ಸಾಗಿಸಬಹುದು ಎಂದು ಸ್ಥಳಿಯ ತೊರಗಲ್ಲಮಠದ ದೀಪಕ ಸ್ವಾಮಿ ಹೇಳಿದರು.
ಗ್ರಾಮದಲ್ಲಿ ನೂಲ ಹುಣ್ಣಿಮೆ ಹಾಗೂ ಶ್ರಾವಣ ಮಾಸದ ಅಂಗವಾಗಿ ಸೋಮವಾರ ಹಮ್ಮಿಕೊಂಡಿದ್ದ ವೀರಭದ್ರೇಶ್ವರ ಜಾತ್ರಾ ಮಹೋತ್ಸವದಲ್ಲಿ ಮಾತನಾಡಿದರು. ಧರ್ಮ ಹಾಗೂ ದೇವರಲ್ಲಿ ತಾರತಮ್ಯ ಮಾಡದೆ ಒಬ್ಬರನ್ನೊಬ್ಬರು ಅರಿತು ಜೀವನ ಸಾಗಿಸಬೇಕು ಎಂದರು.
ನಂದಿಮಠದ ಬಾಳಯ್ಯಜ್ಜ ಮಾತನಾಡಿ, ಮನುಷ್ಯ ದಾನ ಧರ್ಮದ ಮೂಲಕ ಬದುಕು ಸಾರ್ಥಕಗೊಳಿಸಿಕೊಳ್ಳಬೇಕು ಎಂದರು. ಬೆಳಗ್ಗೆ ರುದ್ರಾಭಿಷೇಕ, ಪುಷ್ಪಾರ್ಚನೆ, ಬಿಲ್ವಾರ್ಚನೆ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಪುರವಂತರಿಂದ ಯಶೋಗಾಥೆ, ಶಸ್ತ್ರಗಳ ಪ್ರದರ್ಶನ ಜರುಗಿತು. ಸುಮಂಗಲೆಯರಿಂದ ಆರತಿಯೊಂದಿಗೆ ಪಲ್ಲಕ್ಕಿ ಉತ್ಸವ ನಡೆಯಿತು.ಪುರವಂತರ ಆಟವು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಕಲ ವಾದ್ಯಮೇಳದೊಂದಿಗೆ ಹಾದಿ ಬಸವೇಶ್ವರ ದೇವಸ್ಥಾನದವರೆಗೆ ತೆರಳಿತು. ಮಹಾಪ್ರಸಾದ ಜರುಗಿತು.
ವೇದಮೂರ್ತಿ ಬಸವಣ್ಣೆಯ್ಯ ಮಠಪತಿ, ತಾಪಂ ಮಾಜಿ ಅಧ್ಯ ವಿನಯಕುಮಾರ ದೇಸಾಯಿ, ಸಾಯಿ ಪಿಕೆಪಿಎಸ್ ಅಧ್ಯ ಮಹಾರುದ್ರಪ್ಪ ಉಪ್ಪಿನ, ಗ್ರಾಪಂ ಮಾಜಿ ಉಪಾಧ್ಯ ಬಾಬುಗೌಡ ಅಣ್ಣಿಗೇರಿ, ಶಂಕರಗೌಡ ಪಾಟೀಲ, ಶಿವಪ್ಪ ಹೂಗಾರ, ಗುರುಪಾದಯ್ಯ ಮಾಸ್ತಮರ್ಡಿ, ಮಹಾಂತೇಶ ಉಪ್ಪಿನ, ವಿನಯ ಕರಿಕಟ್ಟಿ, ಗುರುರಾಜ ಚವ್ಹನ್ನವರ, ನೀಲಕಂಠ ಹಂಜಿ, ನಿಂಗನಗೌಡ ಪಾಟೀಲ, ಮಹಾಂತೇಶ ಮಾಸ್ತಮರಡಿ, ಪ್ರಕಾಶ ಯರಗಟ್ಟಿ, ಶ್ರೀಶೆಲ ಮರಿಗೌಡರ, ಅನಿಲ ಸರದಾರ ಇತರರಿದ್ದರು.