ಕೊಳವಿ: ಸಮೀಪದ ಮಮದಾಪುರ ಗ್ರಾಮದ ಶ್ರೀ ಚರಮೂರ್ತೇಶ್ವರ ಮಠದಲ್ಲಿ ಭಾನುವಾರ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್ ಮಮದಾಪುರ ಹಾಗೂ ಸಂಯುಕ್ತ ಆಶ್ರಯದಲ್ಲಿ ನೆರವೇರಿತು.
ಶಾಂತಾರೂಢ ಸ್ವಾಮೀಜಿ ಉದ್ಘಾಟನೆ ನೆರವೇರಿಸಿ ಮಾತನಾಡಿ, ಶ್ರದ್ಧೆ, ಭಕ್ತಿಯಿಂದ ಧಾರ್ಮಿಕ ಮನೋಭಾವ ಬೆಳೆಸಿಕೊಂಡು ಪೂಜೆಯಲ್ಲಿ ತೊಡಗಿಕೊಳ್ಳುವುದರಿಂದ ಮನಸ್ಸು ಪರಿಶುದ್ಧವಾಗುತ್ತದೆ ಎಂದು ಹೇಳಿದರು.
ಕೇಶವಾನಂದ ಪುರಿ ಸ್ವಾಮೀಜಿ ಮಾತನಾಡಿ, ಸತ್ಕಾರ್ಯ, ಒಳ್ಳೆಯ ಚಿಂತನೆಗಳಿಂದ ಮಾತ್ರ ಮಾನವ ಜನ್ಮ ಪಾವನವಾಗಲು ಸಾಧ್ಯ ಎಂದರು. ಜಿಲ್ಲಾ ನಿರ್ದೇಶಕಿ ನಾಗರತ್ನ ಹೆಗಡೆ ಮಾತನಾಡಿ, ಸಾಮಾಜಿಕ ಕ್ಷೇತ್ರದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೊಡುಗೆ ಅಪಾರ ಎಂದರು.
ಚರಮೂರ್ತೀಶ್ವರ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಅಧ್ಯಕ್ಷೆ ಮಂಜುಳಾ ವಗ್ಗನ್ನವರ, ಉಪಾಧ್ಯಕ್ಷೆ ಮಹೇಶ ಪಾಟೀಲ, ಸುರೇಶ ಪಾಟೀಲ, ಬಿ.ಜಿ ಪಾವಟೆ, ಸುವೀನ ಜನ್ಮಟ್ಟಿ, ತಾಲೂಕು ಯೋಜನಾಧಿಕಾರಿ ರಾಜು ನಾಯಕ, ಮೇಲ್ವಿಚಾರಕಿ ಚೈತ್ರಾ ಪಾಶ್ಚಾಪುರ, ಈರಪ್ಪ ಸೊಂಡೂರು, ಮಹಾಂತೇಶ ಜನ್ಮಟ್ಟಿ, ಶಂಕರ ಮುರಗೋಡ, ಈರಪ್ಪ ಪತ್ತಾರ, ಸಿದ್ದಪ್ಪ ಕಳ್ಯಾಗೋಳ, ಶಿವಾನಂದ ಸೊಂಡೂರ ಇತರರು ಇದ್ದರು.