ಕೋಲಾರ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಹಲವು ಸಮಾಜಮುಖಿ ಕಾರ್ಯಗಳನ್ನು ಹಮ್ಮಿಕೊಂಡು ಬರುತ್ತಿದ್ದು, ಸ್ವಾತಂತ್ರೊö್ಯÃತ್ಸವ ಹಿನ್ನೆಲೆಯಲ್ಲಿ ಶ್ರದ್ಧಾಕೇಂದ್ರಗಳ ಸ್ವಚ್ಫತಾ ಸಪ್ತಾಹ ಆಚರಿಸಲಾಗುತ್ತಿದೆ ಎಂದು ಯೋಜನೆಯ ತಾಲೂಕು ಯೋಜನಾಧಿಕಾರಿ ಟಿ.ಎಸ್.ಸಿದ್ದಗಂಗಯ್ಯ ತಿಳಿಸಿದರು.
ನಗರದ ಕುರುಬರಪೇಟೆ ಮತ್ತು ಕೋಟೆ ಪ್ರದೇಶದಲ್ಲಿ ಶುಕ್ರವಾರ ಗಂಗಮ್ಮ ಮತ್ತು ಅನ್ನಪೂಣೇಶ್ವರಿ ದೇವಾಲಯದ ಸ್ವಚ್ಫಗೊಳಿಸುವ ಕಾರ್ಯದಲ್ಲಿ ಪಾಲ್ಗೊಂಡು ಮಾತನಾಡಿ, ಶ್ರದ್ಧಾಕೇಂದ್ರಗಳು ಭಕ್ತಿ ನಂಬಿಕೆಯ ಪ್ರತೀಕವಾಗಿವೆ. ಅವುಗಳು ಸ್ವಚ್ಫವಾಗಿದ್ದರೆ ಅಲ್ಲಿ ಶ್ರದ್ಧೆ, ಭಕ್ತಿ, ವಿನಂಮ್ರತೆ ಮೂಡುತ್ತದೆ. ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು ಸಂಕಷ್ಟದಲ್ಲಿರುವವರ ನೆರವಿಗೆ ದಾವಿಸುತ್ತಿರುವುದರ ಜತೆಗೆ ಧಾರ್ಮಿಕ ಕೇಂದ್ರಗಳ ಜೀರ್ಣೋದ್ಧಾರಕ್ಕೆ ನೆರವು ನೀಡುತ್ತಿದ್ದಾರೆ. ಧಾರ್ಮಿಕ ಸ್ಥಳಗಳನ್ನು ಸ್ವಚ್ಛವಾಗಿಟ್ಟಿಕೊಳ್ಳಲು ಪ್ರತಿಯೊಬ್ಬರು ಕೈ ಜೋಡಿಸಬೇಕು ಎಂದರು.
ಯೋಜನೆಯ ವತಿಯಿಂದ ಜಿಲ್ಲೆಯಲ್ಲಿ ಹಲವು ಕೆರೆಗಳ ಪುನಶ್ಚೇತನ, ಗ್ರಾಮಗಳಲ್ಲಿ ಶುದ್ಧನೀರು, ಸಸಿ ನೆಡುವ ಕಾರ್ಯಕ್ರಮ, ನಿರ್ಗತಿಕರು ಹಾಗೂ ಅನಾಥರಿಗೆ ನೆರವು ಸೇರಿದಂತೆ ಹಲವು ಸಾಮಜಿಕ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿರುವುದಾಗಿ ಹೇಳಿದರು.
ಯೋಜನೆಯ ವಲಯ ಮೇಲ್ವಿಚಾರಕರಾದ ಅಕ್ಕಮಹಾದೇವಿ, ವನಿತಾಲಕ್ಷ್ಮೀ ಇತರರು ಇದ್ದರು.