ಕಲಬುರಗಿ: ಇಲ್ಲಿನ ಐತಿಹಾಸಿಕ ಹಜರತ್ ಖ್ವಾಜಾ ಬಂದಾನವಾಜ್ ರ‍್ಗಾದ ಉರುಸ್ ಆರಂಭಗೊಂಡಿದ್ದು, ಎರಡನೇ ದಿನವಾದ ಬುಧವಾರ ಸಂಜೆ ನಗರದಲ್ಲಿ ಶ್ರದ್ಧಾ ಭಕ್ತಿಯಿಂದ ಸಂದಲ್ (ಗಂಧ) ಮೆರವಣಿಗೆ ಜರುಗಿತು. ರಾಜ್ಯ ಮಾತ್ರವಲ್ಲ, ದೇಶದ ವಿವಿಧೆಡೆಯಿಂದ ಹರಿದುಬಂದ ಭಕ್ತಸಾಗರ ಸಾಕ್ಷಿಯಾಯಿತು.
ಮಧ್ಯಾಹ್ನದಿಂದಲೇ ಭಕ್ತರು ಗುಲ್ಶನ್(ಪಬ್ಲಿಕ್) ಗರ್ಡನ್ನಲ್ಲಿ ಜಮಾಯಿಸಿದ್ದರು. ಬಳಿಕ ಖ್ಯಾತನಾಮರು ಕವ್ವಾಲಿ ಪ್ರಸ್ತುತಪಡಿಸಿದರು. ಅದಕ್ಕೆ ಸಜ್ಜಾದರು ಮತ್ತು ಗಣ್ಯರು ಧ್ವನಿಗೂಡಿಸಿದರು. ಮೆಹ್ಫಿಲ್-ಎ&-ಸಮಾ (ಆಧ್ಯಾತ್ಮಿಕ ಸಂಗೀತ ಸಮಾರಂಭ) ನಡೆಯಿತು. ದೇಶದ ವಿವಿಧ ಭಾಗಗಳಿಂದ ಆಗಮಿಸಿದ ಕವ್ವಾಲಿ ಹಾಡುಗಾರರು ಧರ‍್ಮಿಕ ಕಲಾಮ್ಗಳನ್ನು ಹಾಡಿದರು.
ನಂತರ ಸಂದೇಶ ನೀಡಿದ ರ‍್ಗಾ ಮುಖ್ಯಸ್ಥ ಸಜ್ಜಾದೆ ನಶೀನ್ ಸೈಯದ್ ಮೊಹ್ಮದ್ ಅಲಿ ಅಲ್ ಹುಸೇನಿ ತಲೆಯ ಮೇಲೆ ಸಂದಲ್ ಹೊತ್ತು ಸಾಂಪ್ರದಾಯಿಕ ವಿಧಿ&ವಿಧಾನ ನೆರವೇರಿಸಿ ಚಾದಾರ ಸುತ್ತು ಹಾಕಿ ಮೆರವಣಿಗೆಗೆ ಚಾಲನೆ ನೀಡಿದರು. ಮೌಲಾನಾ ಅಬ್ದುಲ್ ರಶೀದ್ ಸಾಹೇಬ್ ವಿಶೇಷ ದುವಾ ಮಾಡಿದರು. ಮೆರವಣಿಗೆಯೂದ್ದಕ್ಕೂ ಧರ‍್ಮಿಕ ಗೀತೆಗಳನ್ನು ಹಾಡುತ್ತ ಹೆಜ್ಜೆ ಹಾಕಲಾಯಿತು.
ಸರ‍್ವಜನಿಕ ಉದ್ಯಾನದಿಂದ ಹೊರಟ ಸಂದಲ್ ಮೆರವಣಿಗೆ ಜಗತ್ ವೃತ್ತದ ಮೂಲಕ ಸೂಪರ್ ಮರ್ಕೆಟ್ಗೆ ತಲುಪಿತು. ಮಸೀದಿಯಲ್ಲಿ ಮಗರಿಬ್ ಮತ್ತು ಇಶಾ ನಮಾಜ್ ಸಲ್ಲಿಸಿದ ಬಳಿಕ ಮತ್ತೆ ಮೆರವಣಿಗೆ ಮುಂದುವರಿಯಿತು. ಗಣೇಶ ಮಂದಿರ, ಬಹಮನಿ ರ‍್ಕಲ್, ನ್ಯಾಷನಲ್ ಚೌಕ್ ಮರ‍್ಗವಾಗಿ ರಾತ್ರಿ ೧೦.೩೦ರ ಸುಮಾರಿಗೆ ಕೆಬಿಎನ್ ರ‍್ಗಾ ತಲುಪಿತು. ಧರ‍್ಮಿಕ ಕರ‍್ಯಕ್ರಮಗಳ ಬಳಿಕ ಶಾಸೊಕ್ತವಾಗಿ ತಡರಾತ್ರಿ ೧ರ ಸುಮಾರಿಗೆ ದೇವರಿಗೆ ಸಜ್ಜಾದೆ ಮರ‍್ಗರ‍್ಶನದಲ್ಲಿ ಗಂಧ ಲೇಪನ ಮಾಡಲಾಯಿತು.
ಬಂದೇನವಾಜ್ ಕುಟುಂಬದ ಸದಸ್ಯರೊಂದಿಗೆ, ಸಜ್ಜಾದಾಗಾನ್, ಮಶಾಯಿಖ್, ಉಲೆಮಾಗಳು, ಡಾ.ಸೈಯದ್ ಮುಸ್ತಾ ಅಲ್ ಹುಸೇನಿ, ಸೈಯದ್ ಯೂಸ್ೂ ಹುಸೇನಿ, ಸೈಯದ್ ಶಹಾ ತಾಖಿಲ್ಹಾ ಹುಸೇನಿ, ಶಹಾ ರಹಿಮುಲ್ಹಾ ಹುಸೇನಿ, ಅಹ್ಮದ್ ಹುಸೇನಿ, ಮರ‍್ತಾಜಾ ಹುಸೇನಿ, ಆಕ್ಯೂಬ್ ಹುಸೇನಿ,