ಜಿಲ್ಲೆ

ಶ್ರದ್ಧಾ ಭಕ್ತಿಯ ಜಂಪ ಉತ್ಸವ

ಬೇಲೂರು: ಪಟ್ಟಣದ ಲಕ್ಷ್ಮೀಪುರ ಬಡಾವಣೆಯಲ್ಲಿರುವ ಗಾಳಿಕೆರೆ ಕೆಂಚರಾಯಸ್ವಾಮಿ ದೇಗುಲದಲ್ಲಿ ಜಂಪ ಉತ್ಸವ ಶುಕ್ರವಾರ ನೂರಾರು ಭಕ್ತರ ಸಮ್ಮುಖದಲ್ಲಿ ನೆರವೇರಿತು.

ದೇವರ ಅಡ್ಡೆ ಉತ್ಸವವನ್ನು ಪ್ರಮುಖ ಬೀದಿಗಳಲ್ಲಿ ಕೊಂಡೊಯ್ದು ಮೆರವಣಿಗೆ ನಡೆಸಲಾಯಿತು. ಜಂಪ ಉತ್ಸವದ ಅಂಗವಾಗಿ ಮುಂಜಾನೆಯಿಂದಲೇ ದೇವಸ್ಥಾನದಲ್ಲಿ ಗಂಗಾ ಪೂಜೆ, ನವಗ್ರಹ ಹೋಮ, ಕಳಸ ಪೂಜೆ, ವಿವಿಧ ಪುಷ್ಪಗಳಿಂದ ಅಲಂಕರಿಸಿ ದೇವರ ಮೂಲ ವಿಗ್ರಹಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ಭಕ್ತರಿಂದ ಭಜನೆ, ಕೀರ್ತನೆ, ದೇವರ ನಾಮಸ್ಮರಣೆ ನಡೆದವು. ನಂತರ ದೇವರ ಅಡ್ಡೆ ಉತ್ಸವ ಮೂರ್ತಿಯನ್ನು ಹೂಗಳಿಂದ ಅಲಂಕರಿಸಿ ಅಡ್ಡ ಪಲ್ಲಕ್ಕಿಯಲ್ಲಿ ಕೂರಿಸಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು.

ಅರ್ಚಕ ಸುರೇಶ್, ಸ್ಥಳೀಯರಾದ ಗಿರಿಯಪ್ಪ, ಗಣೇಶ್, ಚೇತನ್, ರಾಹುಲ್, ಸುನೀಲ್, ಕಿರಣ್, ನಿಖಿಲ್, ಅಮೃತ್ ಇತರರಿದ್ದರು.