ಹಿಂದೂ ಜನಜಾಗೃತಿ ಸಮಿತಿ ರಣರಾಗಿಣಿ ಪದಾಧಿಕಾರಿಗಳು ಶುಕ್ರವಾರ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಸುಧೀರ ಹೇರೆಕರ್, ಡಾ.ಜ್ಯೋತಿ ದಾಬೋಲ್ಕರ್ ಇತರರಿದ್ದರು. 
ಜಿಲ್ಲೆ

ಶ್ರದ್ಧಾ ಕೊಲೆಗಾರನನ್ನು ಗಲ್ಲಿಗೇರಿಸಿ

ಬೆಳಗಾವಿ: ದೆಹಲಿಯಲ್ಲಿ ಮುಂಬೈ ಮೂಲದ ಶ್ರದ್ಧಾಳನ್ನು ಅಮಾನುಷವಾಗಿ ಕೊಲೆಗೈದವನಿಗೆ ಗಲ್ಲುಶಿಕ್ಷೆ ವಿಧಿಸುವಂತೆ ಒತ್ತಾಯಿಸಿ ಹಿಂದು ಜನಜಾಗೃತಿ ಸಮಿತಿ ರಣರಾಗಿಣಿ ವತಿಯಿಂದ ಶುಕ್ರವಾರ ನಗರದಲ್ಲಿನ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ರವಾನಿಸಲಾಯಿತು. ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಜಮಾಯಿಸಿದ ಹಿಂದು ಜನಜಾಗೃತಿ ಸಮಿತಿ ರಣರಾಗಿಣಿ ಕಾರ್ಯಕರ್ತರು ಹಂತಕನ ವಿರುದ್ಧ ೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಮೇ 18ರಂದು ದಕ್ಷಿಣ ದೆಹಲಿಯ ಮೆಹ್ರೌಲಿಯಲ್ಲಿ ಅಫ್ತಾಬ್ ಪೂನಾವಾಲಾ ಪ್ರೇಯಸಿ ಶ್ರದ್ಧಾಳನ್ನು ಕೊಲೆಗೈದು, ಮೃತದೇಹವನ್ನು 35 ಭಾಗಗಳಾಗಿ ಕತ್ತರಿಸಿ ವಿಕೃತಿ ಮೆರೆದಿದ್ದು, ಮಾನವ ಕುಲವೇ ತಲೆ ತಗ್ಗಿಸುವಂತಹ ದುಷ್ಟ ಕೃತ್ಯ ಎಂದು ಖಂಡಿಸಿದರು. ಶ್ರದ್ಧಾ ಕೊಲೆ ಪ್ರಕರಣ ಲವ್ ಜಿಹಾದ್ ಆಗಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ತಪ್ಪಿತಸ್ಥ ಯುವಕನನ್ನು ಗಲ್ಲಿಗೇರಿಸಬೇಕು ಹಾಗೂ ಅಪಾಯಕಾರಿ ಲವ್ ಜಿಹಾದ್ ತಡೆಗಟ್ಟಲು ಕಠಿಣ ಕಾನೂನು ಜಾರಿಗೆ ತರಬೇಕು ಎಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಸುಧೀರ ಹೇರೆಕರ್, ಡಾ.ಜ್ಯೋತಿ ದಾಬೋಲ್ಕರ್ ಸೇರಿ ಪದಾಧಿಕಾರಿಗಳು ಇದ್ದರು.