ಭದ್ರಾವತಿ: ನಗರದ ಬಿಜೆಪಿ ಕಚೇರಿಯಲ್ಲಿ ನಗರ ಹಾಗೂ ಗ್ರಾಮಾಂತರ ಬಿಜೆಪಿ ಮಂಡಲದಿಂದ ಗುರುವಾರ ಶ್ಯಾಮಾಪ್ರಸಾದ್ ಮುಖರ್ಜಿ ಅವರ ಭಿತ್ತಿಚಿತ್ರ ಉದ್ಘಾಟಿಸಲಾಯಿತು. ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಜಿ.ಆನಂದಕುಮಾರ್ ಬಿಡುಗಡೆ ಮಾಡಿದರು. ಭದ್ರಾವತಿ ಗ್ರಾಮಾಂತರ ಅಧ್ಯಕ್ಷ ಕೆ.ಎಚ್.ತೀರ್ಥಯ್ಯ ಮಾತನಾಡಿ, ಜೂ.23ರಂದು ಮುಖರ್ಜಿ ಅವರ ಬಲಿದಾನ ದಿನಾಚರಣೆಯನ್ನು ಪ್ರತಿಯೊಂದು ಬೂತ್‌ಗಳಲ್ಲಿಯೂ ಆಚರಿಸಲಾಗುವುದು ಎಂದು ತಿಳಿಸಿದರು. ಬಿಜೆಪಿ ಮಂಡಲ ಅಧ್ಯಕ್ಷ ಜಿ.ಧರ್ಮಪ್ರಸಾದ್ ನೇತೃತ್ವದಲ್ಲಿ ಸಭೆ ನಡೆಸಲಾಯಿತು. ಮುಖಂಡರಾದ ಮಂಗೋಟೆ ರುದ್ರೇಶ್, ಪ್ರಧಾನ ಕಾರ್ಯದರ್ಶಿ ಚನ್ನೇಶ್, ಮೊಸರಳ್ಳಿ ಅಣ್ಣಪ್ಪ, ರಘುರಾಮ್, ಸುಬ್ಬಣ್ಣ, ನಂಜಪ್ಪ ಧನುಷ್ ಇತರರಿದ್ದರು.