ಜಿಲ್ಲೆ

ಶ್ಯಾಮಸುಂದರ ಜೀವನ ಚರಿತ್ರೆ ಪಠ್ಯಕ್ಕೆ ಅಳವಡಿಸಿ

ಬೀದರ್: ಶೇರ್ ಏ ದಕ್ಕನ್ ಖ್ಯಾತಿಯ ಬಿ.ಶ್ಯಾಮಸುಂದರ್ ಅವರ 112ನೇ ಜನ್ಮ ದಿನಾಚರಣೆ ಸೋಮವಾರ ಇಲ್ಲಿನ ಶ್ಯಾಮಸುಂದರ ನಗರದ ಮುಖ್ಯ ರಸ್ತೆಯ ವೃತ್ತದಲ್ಲಿ ಜರುಗಿತು.

ಬಿ.ಶಾಮಸುಂದರ್ ಅವರ ಜೀವನ ಚರಿತ್ರೆ ಪಠ್ಯದಲ್ಲಿ ಅಳವಡಿಸಲು ಮುಖ್ಯಮಂತ್ರಿ ಮತ್ತು ಶಿಕ್ಷಣ ಸಚಿವರ ಮೇಲೆ ಒತ್ತಡ ಹೇರಲು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಜನಪ್ರತಿನಿಧಿಗಳಿಗೆ ಜನ್ಮ ದಿನಾಚರಣೆ ಸಮಿತಿ ಮತ್ತು ಅಭಿಮಾನಿಗಳ ಬಳಗ ಆಗ್ರಹಿಸಿತು.

ಉದ್ಘಾಟಿಸಿದ ಶಾಸಕ ರಹೀಮ್ ಖಾನ್ ಮಾತನಾಡಿ, ಬಿ.ಶ್ಯಾಮಸುಂದರ್ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ ವಿಚಾರಗಳು ಒಂದು ಜಾತಿಗೆ ಸೀಮಿತವಿಲ್ಲ. ಮಾನವ ಕುಲಕ್ಕೆ ಅವರು ಮಾರ್ಗದರ್ಶಕರಾಗಿದ್ದಾರೆ ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಅರವಿಂದಕುಮಾರ ಅರಳಿ ಮಾತನಾಡಿ, ನಿಜಾಮ್ ಹಾಗೂ ಕರ್ನಾಟಕ ಸರ್ಕಾರದಲ್ಲಿ ಮಂತ್ರಿ, ಶಾಸಕರಾಗಿ ವಿವಿಧ ಜನಪರ ಹೋರಾಟಗಳನ್ನು ಶ್ಯಾಮಸುಂದರ್ ಮಾಡಿದ್ದಾರೆ. ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಹೋರಾಟ ಮಾಡಬೇಕು ಎಂದು ಕರೆ ನೀಡಿದರು.

ಮಾಜಿ ಶಾಸಕ ಸೈಯದ್ ಜುಲ್ಫೇಕರ್ ಹಾಸ್ಮಿ, ಮುಖಂಡ ಅನೀಲಕುಮಾರ ಬೆಲ್ದಾರ್ ಮಾತನಾಡಿದರು. ಆನಂದ ದೇವಪ್ಪ, ಶಿವರಾಜ ಢಣಕೆ, ದಿಲೀಪ ಭೋಸ್ಲೆ, ಸುನೀಲಕುಮಾರ ಡೊಳ್ಳೆ, ಅಶೋಕಕುಮಾರ ಮಾಳಗೆ, ವಿಠಲದಾಸ ಪ್ಯಾಗೆ, ಸುರೇಶ ಟಾಳೆ, ನಾಗೇಂದ್ರ ಸಿಂಗೋಡೆ, ಮರೆಪ್ಪ ಹೊಸಮನಿ, ಕಿಶನರಾವ ದೀನೆ, ಪ್ರೇಮಸಾಗರ ದಾಂಡೇಕರ್, ಸುಮಂತ ಕಟ್ಟಿಮನಿ, ಮಹೇಶ ಗೋರನಾಳಕರ್, ರಾಜಕುಮಾರ ಬನ್ನೇರ, ಅಂಬಾದಾಸ ಗಾಯಕವಾಡ, ಮುಕುಂದ, ದೀಪಕ್ ರಾಯ್, ದಶರಥ ಗುರು, ಕಲ್ಲಪ್ಪ ಕೈವಾರೆ, ಮಿಲಿಂದ್ ಗುರೂಜಿ ಇತರರಿದ್ದರು. ಮಹಾದೇವ ಕಾಂಬ್ಳೆ ಸ್ವಾಗತಿಸಿದರು. ಈಶ್ವರ ಕನೇರಿ ವಂದಿಸಿದರು.