ಸಂತೋಷ ದೇಶಪಾಂಡೆ
ಬಾಗಲಕೋಟೆ: ಜಿಲ್ಲೆಯ ನದಿ, ಹಳ್ಳ, ಕೊಳ್ಳಗಳಲ್ಲಿ ಜೀವ ಜಲ ಉಕ್ಕಿ ಹರಿಯುತ್ತಿದೆ. ಕಣ್ಣಾಡಿಸಿದಲೆಲ್ಲ ಹಸರಿನ ದಿಬ್ಬಣ ಕಾಣಸಿಗುತ್ತಿದೆ. ಆದರು ಜಿಲ್ಲೆಯ ಜನರಿಗೆ ಇದು ಮಳೆಗಾಲವೋ, ಬೇಸಿಗೆ ಕಾಲವೋ ಅನ್ನೋದೆ ಸಂಶಯ. ಸೆಕೆಯ ಶಾಖಕ್ಕೆ ಕೋಟೆನಾಡು ಅಕ್ಷರಶಃ ಗಾಬರಿ ಬಿದ್ದಿದೆ..!!
ಕಳೆದ ೧೫ ದಿನಗಳಿಂದ ಜಿಲ್ಲೆಯ ಜನತೆ ಕುಳಿತರು, ನಿಂತರು ಬೇವರಿನ ಸ್ನಾನ ತಪ್ಪುತ್ತಿಲ್ಲ. ಫ್ಯಾನ, ಕೂಲರ್ ಬಳಕೆ ಪ್ರಮಾಣ ಮತ್ತೆ ಹೆಚ್ಚಾಗಿದೆ. ಆದರು ಸಹ ಬಿಸಿಲಿನ ಝಳ ಮಾತ್ರ ಕಡಿಮೆಯಾಗುತ್ತಿಲ್ಲ. ಹವಾಮಾನದ ವೈಪರಿತ್ಯಕ್ಕೆ ಕನಫ್ಯೂಜನ್ ಆಗಿದ್ದು, ಇದರಿಂದ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಇದೇನಾ ಅಂತ ಆತಂಕ ಪಡುತ್ತಿದ್ದಾರೆ.
೨೮ ರಿಂದ ೩೨ ಡಿಗ್ರಿ ಉಷ್ಣಾಂಶ:
ಜಿಲ್ಲಾ ಕೇಂದ್ರ ಸ್ಥಾನ ಬಾಗಲಕೋಟೆ, ಮುಧೋಳ, ಜಮಖಂಡಿ, ರಬಕವಿ-ಬನಹಟ್ಟಿ, ಇಳಕಲ್ಲ, ತೇರದಾಳ, ಗುಳೇದಗುಡ್ಡ, ಬಾದಾಮಿ ಸೇರಿದಂತೆ ನೆತ್ತಿ ಸುಡವಷ್ಟು ಬಿಸಿಲು ಇಲ್ಲವಾದರು ಮಳೆಗಾಲ ತಂಪು ವಾತಾವರಣ ಮಾತ್ರ ಸಂಪೂರ್ಣ ಕ್ಷಿಣಿಸಿದೆ. ಮನೆಯಿಂದ ಹೊರಗೆ ಬಾರದಷ್ಟು ಝಳ ಕಾಡುತ್ತಿರುವ ಪರಿಣಾಮ ಜನ ದಿಕ್ಕು ತೋಚದಂತಾಗಿದ್ದಾರೆ. ಜಿಲ್ಲೆಯಲ್ಲಿ ನಿತ್ಯವು ೨೮ ರಿಂದ ೩೨ ಡಿಗ್ರಿ ವರೆಗೆ ಉಷ್ಣಾಂಶ ದಾಖಲಾಗುತ್ತಿದೆ.
ಕೃಷಿಕರಿಗೆ ಖುಷಿ…
ಹೆಸರು, ಉದ್ದು ಸೇರಿದಂತೆ ವಿವಿಧ ಬೆಳೆ ಬೆಳೆದ ಕೃಷಿಕರು ಖುಷಿಯಲ್ಲಿದ್ದಾರೆ. ವಾಡಿಕ್ಕಿಂತ ಶೇ.೫೦ ಮಳೆಯಾಗಿದೆ. ಅದರ ಜೊತೆಗೆ ಬಿಸಿಲು ಆವರಿಸಿದ್ದರಿಂದ ಬೆಳೆಗಳು ರೋಗಕ್ಕೆ ತುತ್ತಾಗುತ್ತಿಲ್ಲ. ಕೀಟನಾಶಕ ಸಿಂಪಡಣೆ ಖರ್ಚು ಉಳಿಯುತ್ತಿದೆ. ಕೃಷಿಕರಿಗೆ ಒಂದು ರೀತಿಯಲ್ಲಿ ವರದಾನವಾಗಿದೆ. ಆದರೇ ಹೀಗೆ ಮುಂದು ವರೆದರೇ ಮಳೆರಾಯ ಸಂಪೂಣ ಕೈಕೊಟ್ಟಲ್ಲಿ ಕೆಲವು ಬೆಳೆಗಳು ತೇವಾಂಶ ಕೊರತೆಯಿಂದ ನಲಗುವ ಸಾಧ್ಯತೆ ದಟ್ಟವಾಗಿದೆ.
ಇದೇನು ಹವಾಮಾನ ವೈಪರಿತ್ಯನಾ?
ಏಕಾ ಏಕಿ ಆವರಿಸುವ ಮೋಡಗಳು ನೋಡಿದರೇ ಇನ್ನೇನು ಭರ್ಜರಿಯಾಗಿ ವರುಣ ದೇವ ಕೃಪೆ ತೋರುತ್ತಾನೆ ಎಂದುಕೊಳ್ಳುತ್ತಾರೆ. ಆದರೇ ಕ್ಷಣಾರ್ಧದಲ್ಲೆ ಮೋಡಗಳು ಚದುರಿ ಮಾಯವಾಗುತ್ತೀವೆ. ಈ ರೀತಿಯ ಹವಾಮಾನದಲ್ಲಿ ಬದಲಾವಣೆ ಸಾಕಷ್ಟು ಜನರಿಗೆ ಅನುಮಾನ ಮೂಡುವಂತಾಗಿದೆ. ಹ್ಯೂಮಿನಿಟಿ ಸಂಕಟ ಮಾತ್ರ ತಡೆಯಲಾಗುತ್ತಿಲ್ಲ. ಹವಾಮಾನ ವೈಪರಿತ್ಯನಾ ಎನ್ನುವ ಪ್ರಶ್ನೆ ಕಾಡುತ್ತಿದೆ. ಆದರೇ ಹವಾಮಾನ ತಜ್ಞರು ಮಾತ್ರ ಅಲ್ಲ ಕಳೆದಿದ್ದಾರೆ. ನಮ್ಮದು ಬಯಲು ಸೀಮೆ, ಸಮುದ್ರಮಟ್ಟಕ್ಕಿಂತ ೫೦೦ ಮೀಟರ ಎತ್ತರದಲ್ಲಿ ಇದ್ದೇವೆ. ಗಾಳಿಯಲ್ಲಿ ನೀರಿನ ಅಂಶ ಇದೆ. ಈಗ ಗಾಳಿಯು ಆದ್ರತೆ(ಒತ್ತಡ)ದಿಂದ ಕೂಡಿದೆ. ಹೀಗಾಗಿ ಸೆಕೆ ಕಂಡು ಬರುತ್ತಿದೆ ಎಂದು ವಿಜಯವಾಣಿಗೆ ಹವಾಮಾನ ತಜ್ಞ ಪ್ರವೀಣ ಗುಳೇದ ಮಾಹಿತಿ ಹಂಚಿಕೊಂಡರು.
ತಂಪು ಪಾನೀಯಗಳಿಗೆ ಮೊರೆ?
ಕೂಲರ್, ಫ್ಯಾನ ಜೊತೆಗೆ ಬೀಸಿಲಿನ ಝಳಕ್ಕೆ ಜನರು ತಂಪು ಪಾನೀಯಗಳಿಗೆ ಮೊರೆ ಹೋಗುತ್ತಿದ್ದಾರೆ. ಎಳೆನೀರು, ಮಜ್ಜಿಗೆ, ಹಣ್ಣು ಸೇರಿದಂತ ತಂಪು ಪಾನೀಯಗಳಿಗೆ ಮೊರೆ ಹೋಗುತ್ತಿದ್ದಾರೆ. ಹೇಗಾದರು ಆಗಲಿ ಬೇವರಿನ ಮಜ್ಜನ ಕಡಿಮೆ ಆಗಲಿ. ಕೃಪೆ ತೋರು ಮಳೆರಾಯ ಅಂತ ಪ್ರಾರ್ಥಿಸುತ್ತಿದ್ದಾರೆ.