ಜಿಲ್ಲೆ

ಶೌರ್ಯ ಜಾಗರಣ ಹನುಮನ ರಥಯಾತ್ರೆಗೆ ಭವ್ಯ ಸ್ವಾಗತ

ಹಾಸನ: ವಿಶ್ವ ಹಿಂದೂ ಪರಿಷತ್, ಬಜರಂಗದಳ ಪ್ರಖಂಡದಿಂದ ಹಮ್ಮಿಕೊಂಡಿದ್ದ ಶೌರ್ಯ ಜಾಗರಣ ಹನುಮನ ರಥಯಾತ್ರೆ ನಗರದ ಕೆ.ಎಸ್.ಆರ್.ಟಿ.ಸಿ. ಡಿಪೋ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ಭವ್ಯ ಸ್ವಾಗತದೊಂದಿಗೆ ಬರಮಾಡಿಕೊಳ್ಳಲಾಯಿತು.

ದೇಶಕ್ಕೆ ಹಾಗೂ ಸನಾತನ ಹಿಂದೂ ಧರ್ಮಕ್ಕಾಗಿ ಬಲಿದಾನಗೈದವರ ಭಾವಚಿತ್ರಗಳನ್ನು ಒಳಗೊಂಡತ ಹಿಂದೂ ಸಮಾಜದ ಶೌರ್ಯದ ಪ್ರತೀಕವಾಗಿ ಈ ರಥವು ನಗರಕ್ಕೆ ಆಗಮಿಸದ ಸಂದರ್ಭದಲ್ಲಿ ವಿಶೇಷ ಪೂಜೆ ಸಲ್ಲಿಸಿ ನಂತರ ಬೈಕ್ ಜಾತ್ರದ ಮೂಲಕ ಮೆರವಣಿಗೆ ಮಾಡಲಾಯಿತು.

ನಂತರ ರಥವನ್ನ ತುಮುಕೂರಿಗೆ ಬೀಳ್ಕೊಡಲಾಯಿತು.ಶೌರ್ಯ ಜಾಗರಣ ರಥ ಯಾತ್ರೆಯ ಸಮಾರೋಪವು ಅ.10 ರಂದು ಉಡುಪಿಯಲ್ಲಿ ನಡೆಯುವ ವಿರಾಟ್ ಹಿಂದೂ ನಂತರ ಮುಕ್ತಾಯಗೊಳ್ಳಲಿದೆ.

ಈ ಸಂದರ್ಭದಲ್ಲಿ ಜಿಲ್ಲಾ ವಿಶ್ವ ಹಿಂದೂ ಪರಿಷತ್ತಿನ ಕಾರ್ಯದರ್ಶಿ ಮಹಿಪಾಲ್, ತಾಲ್ಲೂಕು ಅಧ್ಯಕ್ಷ ಅನೂಪ್, ಉಪಾಧ್ಯಕ್ಷ ಸಾಯಿಪ್ರಸಾದ್, ನಗರ ಅಧ್ಯಕ್ಷ ವೇಣುಗೋಪಾಲ್, ಬಜರಂಗದಳದ ಸಂಯೋಜಕ ಶರತ್, ಕೆಸಿಪಿ ಗ್ರೂಪ್ಸ್‌ನ ಮಾಲೀಕ ಕಿರಣ್ ಗೌಡ, ಜಿಲ್ಲಾ ಕಾರ್ಯದರ್ಶಿ ವಿಕಾಸ್, ಬಜರಂಗದಳ ನಗರ ಕಾರ್ಯದರ್ಶಿ ಅಭಿ,ಭರತ್, ರಕ್ಷಿತ್ ಭಾತದ್ವಜ್, ಪ್ರಣಮ್ ಹಾಗೂ ನೂರಾರು ಜನರು ಇದ್ದರು.