ಕೊಡೇಕಲ್ ಗ್ರಾಮದ ವಾರ್ಡ್ 2ರಲ್ಲಿರುವ ಪುರುಷರ ಸಾರ್ವಜನಿಕ ಶೌಚಗೃಹ ಎದುರು ಕೊಳಚೆ ನೀರು ಸಂಗ್ರಹವಾಗಿ ದಾರಿ ಇಲ್ಲದಂತಾಗಿದೆ. 
ಜಿಲ್ಲೆ

ಶೌಚಗೃಹಕ್ಕೆ ಹೋಗುವ ದಾರಿ ಸರಿಪಡಿಸಿ

ಕೊಡೇಕಲ್: ಗ್ರಾಮದ 2ನೇ ವಾರ್ಡ್ನಲ್ಲಿ ಪುರುಷರ ಸಾರ್ವಜನಿಕ ಶೌಚಗೃಹದ ಎದುರು ಕೊಳಚೆ ನೀರು ಹರಿಯುತ್ತಿರುವ ಕಾರಣ ದಾರಿ ಇಲ್ಲದಂತಾಗಿದೆ ಹೀಗಾಗಿ ಕೂಡಲೇ ದಾರಿ ಮಾಡಿಕೊಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ವೃದ್ಧರು, ಮಕ್ಕಳು ಮತ್ತು ಸಾರ್ವಜನಿಕರು ಶೌಚಗೃಹಕ್ಕೆ ತೆರಳಲು ತುಂಬಾ ತೊಂದರೆ ಅನುಭವಿಸುವಂತಾಗಿದೆ. ಹೀಗಾಗಿ ಕೂಡಲೇ ಸರಿಪಡಿಸಿ ದಾರಿ ಮಾಡಿಕೊಡಬೇಕು ಎಂಬುದು ಸಾರ್ವಜನಿಕರು ಮನವಿ ಮಾಡಿದ್ದಾರೆ.

ಈ ಬಡಾವಣೆಯಲ್ಲಿ ನಿರ್ಮಿಸಿರುವ ಚರಂಡಿ ಸಂಪೂರ್ಣ ತ್ಯಾಜ್ಯದಿಂದ ತುಂಬಿಕೊAಡಿದೆ. ಇದರಿಂದಾಗಿ ರಸ್ತೆ ಮೇಲೆ ಹರಿಯುವ ಚರಂಡಿ ಹಾಗೂ ಮಳೆ ನೀರು ಸಾರ್ವಜನಿಕ ಶೌಚಗೃಹದೊಳಗೆ ನುಗ್ಗುತ್ತಿರುವ ಕಾರಣ ಶೌಚಾಲಯಕ್ಕೆ ಹೋಗದಂತಾಗಿದೆ ಎಂದು ಆರೋಪಿಸಿದರು. ಕುರಿತು ಕೂಡಲೇ ಸರಿಪಡಿಸುವಂತೆ ಅನೇಕ ಬಾರಿ ಗ್ರಾಮ ಪಂಚಾಯಿತಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಕೂಡಲೇ ಶೌಚಗೃಹಕ್ಕೆ ತೆರಳುವ ರಸ್ತೆ ದುರಸ್ತಿಗೊಳಿಸಿ ಸಮಸ್ಯೆಗೆ ಪರಿಹಾರ ಕಲ್ಪಿಸಿಕೊಡಬೇಕು ಎಂದು ವಾರ್ಡ್ ನಿವಾಸಿಗಳಾದ ಮಲ್ಲಣ್ಣ ಹೂಗಾರ, ನಾಗರಾಜ ಹೂಗಾರ, ಚನ್ನಪ್ಪ ಹೂಗಾರ, ಬಸಲಿಂಗಯ್ಯ ಮಠ ಸೇರಿ ಅನೇಕರು ಒತ್ತಾಯಿಸಿದ್ದಾರೆ. ಹಾಗೊಂದು ವೇಳೆ ವಿಳಂಬ ಮಾಡಿದ್ದಲ್ಲಿ ಗ್ರಾಪಂ ಎದುರು ಧರಣಿ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.