ರಾಯಬಾಗ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ವಚನಕಾರ ನುಲಿಯ ಚಂದಯ್ಯನವರ ಜಯಂತಿ ಕಾರ್ಯಕ್ರಮಕ್ಕೆ ಶಿರಗೂರ ಅಭಿನವ ಕಲ್ಮೇಶ್ವರ ಮಹಾರಾಜರು ಚಾಲನೆ ನೀಡಿದರು. ಡಿ.ಎಸ್​.ನಾಯಿಕ, ಶಿವರುದ್ರ ಕಲ್ಲೋಳಿಕರ, ಎಚ್​.ಎ.ಭಜಂತ್ರಿ, ಮುತ್ತಪ್ಪ ಭಜಂತ್ರಿ ಇತರರಿದ್ದರು. 
ಜಿಲ್ಲೆ

ಶೋಷಿತರು ಏಳಿಗೆ ಹೊಂದಲಿ

ವಿಠ್ಠಲ ಹಣಮಂತ ಬಾಳೇಕುಂದ್ರಿ

ರಾಯಬಾಗ: ಶೋಷಿತ ವರ್ಗದ ಜನರು ಒಳ್ಳೆಯ ಶಿಣ ಪಡೆದು ಶೈಣಿಕ, ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯವಾಗಿ ಏಳಿಗೆ ಹೊಂದಬೇಕೆಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ವಿ.ಎಸ್​.ಚಂದರಗಿ ಹೇಳಿದರು.

ಪಟ್ಟಣದ ಜಗಜೀವನರಾಮ ಭವನದಲ್ಲಿ ಅಖಿಲ ಕರ್ನಾಟಕ ಕುಳುವ ಮಹಾಸಂ ತಾಲೂಕು ಟಕ ಹಾಗೂ ಭಜಂತ್ರಿ ಸಮುದಾಯ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ಶಿವಶರಣ ಕಾಯಕಯೋಗಿ ನುಲಿ ಚಂದಯ್ಯನವರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಪ್ರಾಧ್ಯಾಪಕ ಶಿವರುದ್ರ ಕಲ್ಲೋಳಿಕರ ಮಾತನಾಡಿ, ದೊರೆತ ಅವಕಾಶ ಸದ್ಬಳಕೆ ಮಾಡಿಕೊಂಡ ಪ್ರಗತಿ ಹೊಂದಬೇಕೆಂದರು.

ಜಿಪಂ ಮಾಜಿ ಸದಸ್ಯ ಡಿ.ಎಸ್​.ನಾಯಿಕ ಮಾತನಾಡಿ, ನುಲಿ ಚಂದಯ್ಯ ಕಾಯಕದೊಂದಿಗೆ ವಚನ ರಚಿಸಿ ಶ್ರೇಷ್ಠ ಶಿವಶರಣರಾಗಿದ್ದಾರೆ ಎಂದರು.
ನುಲಿ ಚಂದಯ್ಯನವರ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಿತು. ಶಿರಗೂರದ ಅಭಿನವ ಕಲ್ಮೇಶ್ವರ ಮಹಾರಾಜರು ಸಾನ್ನಿಧ್ಯ ವಹಿಸಿದ್ದರು. ಎಕೆಎಂಎಸ್​ ರಾಜ್ಯ ಉಪಾಧ್ಯ ಎಚ್​.ಎ.ಭಜಂತ್ರಿ, ಜಿಲ್ಲಾಧ್ಯ ಮುತ್ತಪ್ಪ ಭಜಂತ್ರಿ, ಶಿವಪ್ಪ ಭಜಂತ್ರಿ, ಗೋವಿಂದ ಭಜಂತ್ರಿ, ಅನಿಲ ಕೊರವಿ, ಮಹಾದೇವ ಮಲಾಜೂರೆ, ಪರಶುರಾಮ ಭಜಂತ್ರಿ, ರಾಣಪ್ಪಾ ಭಜಂತ್ರಿ, ಸುರೇಶ ಅಮ್ಮಿನಭಾವಿ, ವಿಜಯ ಕೊರವಿ ಇತರರಿದ್ದರು.