filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (0.49055526, 0.47517857);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 39; 
ಜಿಲ್ಲೆ

ಶೋಷಿತರಿಗೆ ಅನ್ಯಾಯವಾದರೆ ಹೋರಾಡಲು ಸಿದ್ಧ

ಚಿತ್ರದುರ್ಗ: ಶೋಷಿತ ಸಮುದಾಯಗಳಿಗೆ ಯಾವುದೇ ಸರ್ಕಾರ, ಯಾವ ಪಕ್ಷದಿಂದಲೇ ಅನ್ಯಾಯವಾದಲ್ಲಿ ಹೋರಾಡಲು ಸಿದ್ಧ ಎಂದು ಕರ್ನಾಟಕ ರಾಜ್ಯ ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ಮಹಾ ಸಂಚಾಲಕ ಕೆ.ಎಂ.ರಾಮಚಂದ್ರಪ್ಪ ತಿಳಿಸಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಒಕ್ಕೂಟ ಯಾವ ಪಕ್ಷದ ಪರವಾಗಿಯೂ ಇಲ್ಲ. ನಮ್ಮ ಬೇಡಿಕೆಗೆ ಸ್ಪಂದಿಸುವ ಸರ್ಕಾರದ ಮೇಲೆ ಒತ್ತಡ ಹಾಕಿ, ಕಾರ್ಯಗತವಾಗುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದರು.

ಕೈ ಅಭ್ಯರ್ಥಿ ಬೆಂಬಲಿಸಿ: ಸಂಚಾಲಕ ಅನಂತ್ ನಾಯ್ಕ ಮಾತನಾಡಿ, ಶಿಕ್ಷಕರ ಸಮಸ್ಯೆಗಳು ಸಾಕಷ್ಟಿವೆ. ಅವುಗಳು ಹಂತ-ಹಂತವಾಗಿ ಈಡೇರಲು ರಾಜ್ಯದ ಕಾಂಗ್ರೆಸ್ ಸರ್ಕಾರಕ್ಕೆ ಬಲ ತುಂಬಬೇಕಿದೆ. ಅದಕ್ಕಾಗಿ ಕೈ ಅಭ್ಯರ್ಥಿ ಬೆಂಬಲಿಸಿ ಎಂದು ಮನವಿ ಮಾಡಿದರು.

ಬಿಜೆಪಿ ಅಧಿಕಾರದಲ್ಲಿದ್ದಾಗ ರಾಜ್ಯದ ಪಠ್ಯ ಕ್ರಮವನ್ನು ಮೌಢ್ಯ ಸೇರಿ ಕೇಸರಿಕರಣ ಮಾಡಿತ್ತು. ಅದನ್ನು ಪರಿಷ್ಕರಿಸುವ ಭರವಸೆ ನೀಡಿದ್ದ ಸಿಎಂ ಸಿದ್ದರಾಮಯ್ಯ ಅದರಂತೆ ನಡೆದುಕೊಂಡಿದ್ದಾರೆ. ಮೊದಲಿನಿಂದಲೂ ಸಾಮಾಜಿಕ ನ್ಯಾಯ ಉಳಿದಿರುವುದೇ ಕಾಂಗ್ರೆಸ್‌ನಿಂದ. ಕೇಂದ್ರದ ಎನ್‌ಇಪಿ ನೀತಿ ಶಿಕ್ಷಣ ವ್ಯವಸ್ಥೆ ವಿರುದ್ಧವಾಗಿದೆ. ಹೀಗಾಗಿ ಬೆಂಬಲಿಸುತ್ತಿದ್ದೇವೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಮುಖಂಡರಾದ ವೆಂಕಟರಾಮಯ್ಯ, ಆದರ್ಶ ಯಲ್ಲಪ್ಪ, ರಾಮಕೃಷ್ಣ, ಸಿ.ಟಿ.ಕೃಷ್ಣಮೂರ್ತಿ, ಎಚ್.ಮಂಜಪ್ಪ, ಪಿ.ರಘು, ಬಿ.ಟಿ.ಜಗದೀಶ್, ಪ್ರಸನ್ನಾಚಾರ್, ಪ್ರಕಾಶ್ ರಾಮಾನಾಯ್ಕ, ಕುಮಾರ್, ಸಿದ್ದೇಶಪ್ಪ ಇತರರಿದ್ದರು.