ಚಿಕ್ಕಮಗಳೂರು: ಪುರೋಹಿತ ಶಾಹಿ ಸಂಸ್ಕೃತಿಯಿAದ ನಲುಗಿ, ಜೀವನವೇ ಕತ್ತಲೆಯಿಂದ ಕವಿದಿದ್ದ ಲಕ್ಷಾಂತರ ಶೋಷಿತರು, ದಮನಿತರ ಬದುಕಿಗೆ ಶ್ರೀ ನಾರಾಯಣಗುರುಗಳು ಸೂರ್ಯನಂತೆ ಉದಯಿಸಿದ ಮಹಾಚೇತನ ಎಂದು ಬಿಎಸ್ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಟಿ.ರಾಧಾಕೃಷ್ಣ ತಿಳಿಸಿದರು.
ನಗರದ ಬಿಎಸ್‌ಪಿ ಕಚೇರಿಯಲ್ಲಿ ೧೬೯ನೇ ಶ್ರೀ ನಾರಾಯಣಗುರುಗಳ ಜಯಂತಿ ಕಾರ್ಯಕ್ರಮದಲ್ಲಿ ನಾರಾಯಣ ಗುರುಗಳ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ಪುರೋಹಿತ ಶಾಹಿಗಳು ದೇಶವನ್ನು ಒಡೆದಾಳಿರುವ ಬಹಳಷ್ಟು ನಿದರ್ಶನಗಳಿವೆ. ಜಾತಿ ವ್ಯವಸ್ಥೆಯಡಿ ಕಂದಕ ಸೃಷ್ಟಿಸಿದ ಮೇಲ್ವರ್ಗದವರು ಕೆಳವರ್ಗದವರನ್ನು ಕಸಕ್ಕಿಂತ ಕಡೆ ಮಾಡಿದ್ದರು. ಇಂಥ ಶೋಷಿತರನ್ನು ಸ್ವಾಸ್ಯö್ಥ ಸಮಾಜದ ಅಂಗವಾಗಿಸಲು ನಾರಾಯಣ ಗುರುಗಳು ೧೮೫೪ರಲ್ಲಿ ಕೇರಳದಲ್ಲಿ ಜನಿಸಿ ಶೋಷಿತರು, ಮಹಿಳೆಯರಿಗಾಗಿ ಹೋರಾಟ ರೂಪಿಸಿ ಯಶಸ್ವಿಯಾದರು ಎಂದರು.
ನಿರAತರವಾಗಿ ಬಡವರು ಹಾಗೂ ಅನ್ಯಾಯಕ್ಕೆ ಒಳಗಾದವರ ಪರವಾಗಿ ಬೆನ್ನುಲುಬಾಗಿ ನಿಂತ ಕಾರಣದಿಂದ ನಾರಾಯಣಗುರುಗಳು ಪ್ರಸ್ತುತ ದಿನಗಳಲ್ಲಿ ಮಾದರಿಯಾಗುವ ಜೊತೆಗೆ ರಾಷ್ಟçದಲ್ಲೇ ಅಗ್ರಗಣ್ಯ ಸ್ಥಾನ ವನ್ನು ಪಡೆದುಕೊಳ್ಳಲು ಸಾಧ್ಯವಾಗಿದೆ. ಇಂದಿನ ಯುವಪೀಳಿಗೆ ಅವರ ಜೀವನ ಚರಿತ್ರೆಯನ್ನು ಮೈಗೂಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಬಿಎಸ್ಪಿ ರಾಜ್ಯ ಕಾರ್ಯದರ್ಶಿ ಕೆ.ಬಿ.ಸುಧಾ ಮಾತನಾಡಿ, ನಾರಾಯಣ ಗುರುಗಳು ಒಂದು ಸಮಾಜಕ್ಕೆ ನಿಂತವರಲ್ಲ, ವಿಶ್ವಕ್ಕೆ ಗುರುಗಳಾದವರು. ಧಾರ್ಮಿಕ ಶೋಷಣೆಗೆ ಒಳಗಾದವರಿಗೆ ಪುರೋಹಿತರ ಶಾಹಿ ವ್ಯವಸ್ಥೆ ವಿರುದ್ಧವೇ ಸಿಡಿದೆದೆದ್ದು ಶಿವನ ದೇವಾಲಯ ನಿರ್ಮಿಸಿ ಎಲ್ಲ ಮಾನವಿಗೆ ದೇವನೊಬ್ಬನೇ ಎಂಬ ಸಂದೇಶ ರವಾನಿಸಿದ ದಿವ್ಯ ಚೇತನ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬಿಎಸ್‌ಪಿ ತಾಲೂಕು ಅಧ್ಯಕ್ಷ ಎಚ್.ಕುಮಾರ್, ನಾರಾಯಣ ಗುರುಗಳೆಂಬ ಓರ್ವ ಸಮಾಜಕ ಸುಧಾರಕ ಉದಯಿಸಿ, ಸಮಾಜದ ತಾರತಮ್ಯಗಳನ್ನು ಕಡಿಮೆ ಮಾಡಲು ಇಡೀ ಜೀವನವನ್ನು ಮುಡಿಪಾಗಿಟ್ಟರು. ಅವರು ಪ್ರತಿಪಾದಿಸಿದ ಒಂದೇ ಜಾತಿ, ಒಂದೇ ಮತ, ಹಾಗೂ ಒಂದೇ ದೇವರು ಎಂಬುದು ಸತ್ಯವಾಕ್ಯವಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಉಡುಪಿ-ಚಿಕ್ಕಮಗಳೂರು ಲೋಕಸಭಾ ಸಂಯೋಜಕ ಗಂಗಾಧರ್, ಪ್ರಧಾನ ಕಾರ್ಯದರ್ಶಿ ಆರ್.ವಸಂತ್, ಉಪಾಧ್ಯಕ್ಷರಾದ ಹೊನ್ನಪ್ಪ, ಸಿದ್ದಯ್ಯ, ಬಿಎಸ್ಪಿ ಜಿಲ್ಲಾ ಉಪಾಧ್ಯಕ್ಷೆ ಕೆ.ಎಸ್. ಮಂಜುಳಾ ಮತ್ತಿತರರು ಉಪಸ್ಥಿತರಿದ್ದರು.