ಜಿಲ್ಲೆ

ಶೋಷಿತರ ಏಳಿಗೆಗೆ ಶ್ರಮಿಸಿದ್ದ ಕಾನ್ಶಿರಾಂ

ಚಾಮರಾಜನಗರ: ಕಾನ್ಸಿರಾಂ ವಿದ್ಯಾರ್ಥಿ ಸಂಘ ಹೊರತರಲಾದ ಪ್ರಬುದ್ದ ಭಾರತ ಕ್ಯಾಲೆಂಡರ್ ಅನ್ನು ವಿದ್ಯಾರ್ಥಿನಿಯರು ಬಿಡುಗಡೆ ಮಾಡಿದರು.

ನಗರದ ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿರುವ ವಿದ್ಯಾರ್ಥಿ ಸಂಘದ ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ  ಕಾನ್ಸಿರಾಂ ವಿದ್ಯಾರ್ಥಿ ಸಂಘದ ಜಿಲ್ಲಾಧ್ಯಕ್ಷ  ಹೊಂಡರಬಾಳು ವಾಸು ಮಾತನಾಡಿ, ಭಾರತ ದೇಶದ ಮೂಲ ಪುರುಷರಾದ ಭಗವಾನ್ ಬುದ್ದ, ಬಸವಣ್ಣ, ತಂದೆ ಪೆರಿಯಾರ್, ಶಾಹು ಮಹಾರಾಜ, ನಾಲ್ವಡಿ ಕೃಷ್ಣರಾಜ ಒಡೆಯರ್, ನಾರಾಯಣ್ ಗುರು ಈ ಎಲ್ಲ ಮಹಾಪುರುಷರ ಸಾಮಾಜಿಕ ಪರಿವರ್ತನಾ ಚಳವಳಿಯನ್ನು ಆಳವಾಗಿ ಅಧ್ಯಯನ ಮಾಡಿ ಈ ದೇಶಕ್ಕೆ ಸಂವಿಧಾನ ಬರೆದುಕೊಟ್ಟಂತಹ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಒಳಗೊಂಡ ಕ್ಯಾಲೆಂಡರ್ ನ್ನು ಸಂಘದ ವತಿಯಿಂದ ಹೊರತಂದು ಬಿಡುಗಡೆ ಮಾಡಲಾಗಿದೆ ಎಂದರು.

ಅಂಬೇಡ್ಕರ್ ಅವರ ಕನಸಾಗಿದ್ದ ಪ್ರಬುದ್ದ ಭಾರತ ನಿರ್ಮಾಣ ಮಾಡುವ ಆಶಯವನ್ನು ದಾದಾ ಸಾಹೇಬ್ ಕಾನ್ಯಿರಾಂ ಅವರು ಪ್ರಯತ್ನ ಮಾಡಿ ದೇಶದ ಶೋಷಿತರಿಗೆ ರಾಜಕೀಯ ಅರಿವು ಮೂಡಿಸಿದರು.,ಇದರ ಫಲವಾಗಿ ಉತ್ತರ ಪ್ರದೇಶದಲ್ಲಿ ದೇಶದ ಮೊಟ್ಟಮೊದಲ  ಸಾಮಾಜಿಕ‌ಪರಿವರ್ತನಾ ಮುನ್ನುಡೆಸುತ್ತಿರುವ ಬಹುಜನ ನಾಯಕಿ ಮಾಯಾವತಿ ಯವರು ನಾಲ್ಕು ಬಾರಿ ಮುಖ್ಯಮಂತ್ರಿ ಯಾಗಿ ಶೋಷಿತ ಸಮುದಾಯ ಪರ ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಅವರ ಹುಟ್ಟುಹಬ್ಬದಂದು  ಈ ಕ್ಯಾಲೆಂಡರ್ ಹೊರ ತರಲಾಗಿದೆ ಎಂದರು.

ಕಾನ್ಸಿರಾಂ ಅವರು ಸಾಮಾಜಿಕ, ಆರ್ಥಿಕ , ರಾಜಕೀಯವಾಗಿ ತುಳಿತಕ್ಕೆ ಒಳಗಾದ ಶೋಷಿತರ ಏಳಿಗೆಗೆ ಶ್ರಮಿಸಿದವರು . ಅವರು ಮಹಾನ್‌ ಮಾನವತಾವಾದಿ ಡಾ.ಬಿ.ಆರ್‌. ಅಂಬೇಡ್ಕರ್, ಬುದ್ದ ಹಾಗೂ ಬಸವಣ್ಣನವರ ತತ್ವ ಆದರ್ಶ, ವಿಚಾರಗಳನ್ನು ಸೈಕಲ್‌ ಮೂಲಕ ದೇಶಾದ್ಯಂತ ಸಂಚಾರ ಮಾಡಿ ಜನರಿಗೆ ತಿಳಿಹೇಳುವ ಮೂಲಕ ಸಮಾನತೆಗಾಗಿ ಹೋರಾಡಿದರು ಎಂದರು.

ಕಾರ್ಯಕ್ರಮ ದಲ್ಲಿ ಬಿಎಸ್ ಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಪಿ.ಮಹೇಶ್, ತಾಲೂಕು ಉಪಾಧ್ಯಕ್ಷ ಮಹೇಶ್, ಟೌನ್ ಅಧ್ಯಕ್ಷ ರಂಗಸ್ವಾಮಿ, ರವಿಮೌರ್ಯ, ಕಾಂತರಾಜು ಅಮಚವಾಡಿ, ಗೋವಿಂದ, ಕೃಷ್ಣಮೂರ್ತಿ, ಸಿದ್ದರಾಜು, ದೇವಾಲಪುರ ಶಿವಣ್ಣ, ರಾಜು, ಬಾಬು ರಾಮಸಮುದ್ರ, ಮಂಜು, ಗಣೇಶ, ಶಿವು,  ವಿದ್ಯಾರ್ಥಿಗಳು ಹಾಜರಿದ್ದರು.