ಜಿಲ್ಲೆ

ಶೋಷಿತ ವರ್ಗದ ಮೇಲಿನ ಹಿಂಸಾಚಾರಕ್ಕೆ ಖಂಡನೆ

ಯಾದಗಿರಿ: ಈಶಾನ್ಯ ರಾಜ್ಯ ಮಣಿಪುರದಲ್ಲಿ ಕಳೆದ ಆರು ತಿಂಗಳಿಂದ ನಡೆಯುತ್ತಿರುವ ಹಿಂಸಾಚಾರದಲ್ಲಿ ಸಾವಿರಾರು ದಲಿತರ ಮೇಲೆ ಹಲ್ಲೆ ಹಾಗೂ ದೌರ್ಜನ್ಯವೆಸಗಲಾಗಿದ್ದು, ಈ ಬಗ್ಗೆ ಕೇಂದ್ರ ಸಕರ್ಾರ ಚಕಾರವೆತ್ತದಿರುವುದನ್ನು ಖಂಡಿಸಿ ದಲಿತ ಸಂಘರ್ಷ ಸಮಿತಿಯಿಂದ ಶನಿವಾರ ಇಲ್ಲಿನ ಜಿಲ್ಲಾಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.

ಮಣಿಪುರದಲ್ಲಿ ಕುಕಿ ಸಮುದಾಯಕ್ಕೆ ಸೇರಿದ ಇಬ್ಬರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪಿಗಳು ಚಿತ್ರಹಿಂಸೆ ನೀಡಿ ಮೆರವಣಿಗೆ ಮಾಡಿದ್ದಾರೆ. ರಾಜ್ಯದಲ್ಲೂ ಸಹ ಇಂಥ ಅನೇಕ ಘಟನೆಗಳು ದಲಿತರ ಮೇಲೆ ನಡೆಯುತ್ತಲೇ ಇದೆ. ಆದರೆ ಸಕರ್ಾರಗಳು ಮಾತ್ರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಇದರಿಂದ ಸಂತ್ರಸ್ಥೆಯರು ಮಾನಸಿಕ ಆಘಾತಕ್ಕೆ ಒಳಗಾಗಿದ್ದು ಭಯಭೀತರಾಗಿದ್ದಾರೆ. ಸಿಬಿಐ ಮುಂದೆ ಸತ್ಯ ಹೇಳುತ್ತಾರೆ ಎಂಬ ವಿಶ್ವಾಸವಿಲ್ಲ. ಹಾಗಾಗಿ ಮಹಿಳೆಯರನ್ನು ಒಳಗೊಂಡ ಉನ್ನತ ಮಟ್ಟದ ಸಮಿತಿಯಿಂದ ತನಿಖೆ ನಡೆಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಡಿಜಿಪಿ ದಜರ್ೆಯ ಪೊಲೀಸ್ ಅಕಾರಿ ನೇತೃತ್ವದ ವಿಶೇಷ ತಂಡ ರಚಿಸಿ ಮಣಿಪುರ ಘಟನೆ ತನಿಖೆ ನಡೆಸಬೇಕು. ವಿಚಾರಣೆಯನ್ನು ಬೇರೆ ರಾಜ್ಯಕ್ಕೆ ವಗರ್ಾಯಿಸಬೇಕು. ಕುಕಿ ಜನಾಂಗದ ಹೆಣ್ಣು ಮಕ್ಕಳು ಸೈನಿಕರ ಕಾಲು ಹಿಡಿದುಕೊಂಡು ರಕ್ಷಣೆ ಕೇಳುತ್ತಿರುವುದು ಈ ದೇಶದ ವ್ಯವಸ್ಥೆಗೆ ಹಿಡಿದ ಕೈಕನ್ನಡಿಯಾಗಿದೆ ಎಂದು ಆರೋಪಿಸಿದರು.