ಜಿಲ್ಲೆ

ಶೋಕಿ ಮಾಡುವುದು ಬಿಡಿ, ಕೆಲಸ ಮಾಡಿ

ಕಲಬುರಗಿ: ಬಿಜೆಪಿ ಸರ್ಕಾರದಲ್ಲಿ ನಗರದ ಅಭಿವೃದ್ಧಿಗೆ, ಮೂಲ ಸೌಕರ್ಯ ಒದಗಿಸಲು ಮುಖ್ಯಮಂತ್ರಿ ವಿಶೇಷ ನಿಧಿ, ಕೆಕೆಆರ್‌ಡಿಬಿ ಅನುದಾನ, ವಿಧಾನ ಪರಿಷತ್ ನಿಧಿ, ಕ್ರೆಡಲ್ ಸೇರಿ ವಿವಿಧ ಅನುದಾನ ತಂದು ಅಭಿವೃದ್ಧಿ ಮಾಡಲಾಗಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಒಂಬತ್ತು ತಿಂಗಳಾದರೂ ಒಂದೇ ಒಂದು ಮೂಲಸೌಕರ್ಯದ ಕಾರ್ಯ ಮಾಡಿಲ್ಲ ಎಂದು ಬಿಜೆಪಿ ಮಹಾನಗರ ಜಿಲ್ಲಾಧ್ಯಕ್ಷ ಚಂದು ಪಾಟೀಲ್ ಕಿಡಿ ಕಾರಿದರು.

ಬಿಜೆಪಿ ರಾಜ್ಯಾಧ್ಯಕ್ಷರ ಆದೇಶದಂತೆ ಮತ್ತದಾರರಿಗೆ ಉತ್ತರಿಸಿ ಅಭಿಯಾನವನ್ನು ಸ್ಥಳೀಯ ಘಟಕದಿಂದ ಹಮ್ಮಿಕೊಂಡು ಶಾಂತಿಯುತವಾಗಿ ಮೊದಲೇ ಮಾಹಿತಿ ನೀಡಿ ಉಸ್ತುವಾರಿ ಸಚಿವರು, ಉತ್ತರ, ದಕ್ಷಿಣ ಶಾಸಕರ ಮನೆಗೆ ಮನವಿ ನೀಡಿವು. ಆದರೆ ಕಾಂಗ್ರೆಸ್‌ನವರು ದಿಢೀರ್ ಎಂದು ಬಂದು ಮಾಹಿತಿ ನೀಡದೆ ಬೇಕಾಬಿಟ್ಟಿಯಾಗಿ ಗಾಡಿ ತಂದು ಪ್ರಗತಿ ರಥ ಎಂದು ಹೇಳುತ್ತಿರುವುದು ನಾಚಿಕೆಗೇಡು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಹೇಳದೇ ಕೇಳದೆ, ಮಾಹಿತಿ ನೀಡದೆ ಬಿಜೆಪಿ ಕಚೇರಿ ಎದುರು ರಥ ಎಂದು ಬ್ಯಾನರ್ ಹಚ್ಚಿಕೊಂಡು ಬಂದಿದ್ದಾರೆ. ಅಲ್ಲದೆ ಅಸಂವಿಧಾನಿ, ಅವಾಚ್ಯ ಶಬ್ಧಗಳನ್ನು ಬಳಸಿ ಮಾತನಾಡಿದ್ದು, ಕಾಂಗ್ರೆಸ್‌ನ ಸಂಸ್ಕೃತಿ ತೋರಿಸುತ್ತದೆ. ಪ್ರಜಾಸತಾತ್ಮಕವಾಗಿ ಪ್ರಶ್ನಿಸಿ, ಅದಕ್ಕೆ ಪ್ರತಿಕ್ರಿಯೆ ನೀಡಬೇಕು. ಅದನ್ನು ಬಿಟ್ಟು ಬೇಕಾಬಿಟ್ಟಿ ವರ್ತಿಸಿ, ಅಸಂವಿಧಾನಿಕ ಪದ ಬಳಸಿದರೆ ಅದಕ್ಕೆ ತಕ್ಕ ಉತ್ತರವನ್ನು ನೀಡಲು ನಾವು ಸಹ ಸಿದ್ಧರಿz್ದÉÃವೆ ಎಂದು ಎಚ್ಚರಿಕೆ ನೀಡಿದರು.

ಗ್ರಾಮಾಂತರ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ್ ರz್ದÉÃವಾಡಗಿ ಮಾತನಾಡಿ, ಕಾಂಗ್ರೆಸ್ಸಿಗರು ಒಂಬತ್ತು ತಿಂಗಳಿAದ ಬರೀ ಗ್ಯಾರಂಟಿ ಎನ್ನುತ್ತಲೇ ಇದ್ದಾರೆ ವಿನಾಃ, ಮೂಲಸೌಕರ್ಯದತ್ತ ಗಮನವೇ ಹರಿಸುತ್ತಿಲ್ಲ. ಫೆ.೧೧, ೧೨ರಂದು ನಗರದಲ್ಲಿ ದಿಶಾ ಸಭೆ ನಡೆದಿದ್ದು, ಸಂಸದ ಡಾ.ಉಮೇಶ ಜಾಧವ್ ಅವರು ಪರಿಶೀಲನೆ ನಡೆಸುತ್ತಿದ್ದಾರೆ. ನಾಚಿಕೆ, ಮಾನ ಮರ್ಯಾದೆ ಇಲ್ಲದ ಕಾಂಗ್ರೆಸ್‌ನ ಶಾಸಕರು, ಸಚಿವರು ಗೈರಾಗಿ ತಮ್ಮ ನಿರಾಸಕ್ತಿಯನ್ನು ಸಾಬೀತುಪಡಿಸಿದ್ದಾರೆ. ರಾಜ್ಯ ಕೇಂದ್ರ ಸರ್ಕಾರದ ಯೋಜನೆಗಳ ಪ್ರಗತಿ ಬಗ್ಗೆ ಚರ್ಚೆಗೆ ನಿರ್ಲಕ್ಷÈ ವಹಿಸಿ, ಅಭಿವೃದ್ಧಿ ವಿರೋಧಿ ಧೋರಣೆ ಪ್ರದರ್ಶಿಸಿದ್ದಾರೆ ಎಂದು ಕಿಡಿ ಕಾರಿದರು.

ಮೇಯರ್ ವಿಶಾಲ ದರ್ಗಿ ಮಾತನಾಡಿ, ನಾನು ಮೇಯರ್ ಆಗಿ ಒಂಬತ್ತು ತಿಂಗಳಾಗಿದ್ದು ಪಾಲಿಕೆ ಅನುದಾನ ಬಿಟ್ಟು, ಇಬ್ಬರು ಶಾಸಕರು ನಗರದ ಅಭಿವೃದ್ಧಿಗೆ ಅನುದಾನವೇ ನೀಡಿಲ್ಲ. ಎಸಿ ಬಸ್ ಇದೆ ಬನ್ನಿ ಎನ್ನುವುದು ಸರಿಯಲ್ಲ. ವೈಯಕ್ತಿಕ ವಿಷಯಕ್ಕೆ ಬರಬೇಡಿ. ಬಂತರೇ ನಮ್ಮ ಶಕ್ತಿ ತೋರಿಸಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಮುಖರಾದ ಮಹಾದೇವ ಬೆಳಮಗಿ, ಶ್ರೀನಿವಾಸ ದೇಸಾಯಿ, ಶಿವಯೋಗಿ ನಾಗನಹಳ್ಳಿ, ಶ್ರೀಮಂತ ನವಲದಿ, ಬಾಬು ಹಾಗರಗುಂಡಗಿ ಇತರರಿದ್ದರು.