ಜಿಲ್ಲೆ

ಶೈವಾಗಮ ಪೂಜಾ ತರಬೇತಿ ಶಿಬಿರಕ್ಕೆ ಚಾಲನೆ

ಹಾಸನ: ನಮ್ಮ ಸಂಸ್ಕೃತಿ, ಆಚಾರ ವಿಚಾರಗಳನ್ನು ಉಳಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಕರ್ನಾಟಕ ರಾಜ್ಯ ಶಿವಾರ್ಚಕ ಸಂಘದ ನಿಕಟಪೂರ್ವ ಅಧ್ಯಕ್ಷ ಕೆ.ಎಂ. ನಂಜುಂಡಪ್ಪ ಅಭಿಪ್ರಾಯಪಟ್ಟರು.
ಚನ್ನರಾಯಪಟ್ಟಣ ತಾಲೂಕಿನ ಆನೆಕೆರೆ ಗ್ರಾಮದ ಶ್ರೀ ವೀರಭದ್ರೇಶ್ವರ ದೇವಾಲಯದಲ್ಲಿ ಹಾಸನ ಜಿಲ್ಲಾ ಹಾಗೂ ನಾಗಮಂಗಲ ತಾಲೂಕು ರಾಜ್ಯ ಶಿವಾರ್ಚಕ ಸಂಘದ ವತಿಯಿಂದ ಸೋಮವಾರದಿಂದ 15 ದಿನಗಳ ಕಾಲ ಹಮ್ಮಿಕೊಂಡಿರುವ ಶೈವಾಗಮ ಪೂಜಾ ತರಬೇತಿ ಶಿಬಿರ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಮುಂದಿನ ಪೀಳಿಗೆಗೂ ನಮ್ಮ ಸಂಸ್ಕೃತಿ, ಸಂಸ್ಕಾರವನ್ನು ದಾಟಿಸಬೇಕಿದೆ. ಆ ಜವಾಬ್ದಾರಿಯನ್ನು ಎಲ್ಲರೂ ಹೊರಬೇಕಿದೆ. ಯುವ ಜನತೆ ಆ ಬಗ್ಗೆ ಗಮನಹರಿಸಿ ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದು ಹೇಳಿದರು.
ಶಿಬಿರಕ್ಕೆ ಚಾಲನೆ ನೀಡಿದ ನಿವೃತ್ತ ಸಂಸ್ಕೃತ ಪ್ರಾಧ್ಯಾಪಕ ಮಲ್ಲಣ್ಣ ಮಾತನಾಡಿ, ಈ ಹಿಂದೆ ನಡೆದಿದ್ದ ಶಿಬಿರಗಳಲ್ಲಿ ಪಾಲ್ಗೊಂಡಿದ್ದವರು ಇಂದು ನಮ್ಮ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುತ್ತಿರುವುದು ಅತ್ಯಂತ ಸಂತಸದ ವಿಷಯ. ಇಂದಿನ ಶಿಬಿರಕ್ಕೂ ಅವರು ಪ್ರೇರಣಾದಾಯಕ ಎಂದರೆ ತಪ್ಪಾಗಲಾರದು. ಆಗಮಿಸಿರುವ ಎಲ್ಲ ವಟುಗಳು ಶಿಬಿರದ ಪ್ರಯೋಜನವನ್ನು ಪಡೆದು ಪೂಜಾ ವಿಧಿವಿಧಾನಗಳನ್ನು ಶಾಸ್ತ್ರಬದ್ಧವಶಗಿ ಕಲಿಯಬೇಕು ಎಂದು ಸಲಹೆ ನೀಡಿದರು.
ಶಿಬಿರದಲ್ಲಿ 50ಕ್ಕೂ ಹೆಚ್ಚು ವಟುಗಳು ದಾಖಲಾಗಿದ್ದರು. ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಶಿವಾರ್ಚಕ ಸಂಘದ ಅಧ್ಯಕ್ಷ ಎಸ್. ಪ್ರದೀಪ್, ಸಂಸ್ಕೃತ ಪ್ರಾಧ್ಯಾಪಕ ವಿಶ್ವನಾಥ್, ಸಂಘದ ನಿರ್ದೇಶಕರಾದ ಸಿಂಧುವಳ್ಳಿ ಬಸವಣ್ಣ, ಮರಗೂರು ಮಲ್ಲಣ್ಣ, ಈಶ್ವರ್, ಚಿಲಕವಾಡಿ ಸೋಮಶೇಖರ್ ಮುಖಂಡರಾದ ಆಯರಹಳ್ಳಿ ರಾಜಣ್ಣ ಇತರರು ಇದ್ದರು.

ಶೈವಾಗಮ ಪೂಜಾ ತರಬೇತಿ ಶಿಬಿರಕ್ಕೆ ಚಾಲನೆ

ನಮ್ಮ ಸಂಸ್ಕೃತಿ, ಆಚಾರ ವಿಚಾರಗಳನ್ನು ಉಳಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಕರ್ನಾಟಕ ರಾಜ್ಯ ಶಿವಾರ್ಚಕ ಸಂಘದ ನಿಕಟಪೂರ್ವ ಅಧ್ಯಕ್ಷ ಕೆ.ಎಂ. ನಂಜುಂಡಪ್ಪ ಅಭಿಪ್ರಾಯ ಪಟ್ಟರು.