ರುಸ್ತುಂಪುರ ಗ್ರಾಮದಲ್ಲಿ ಅಂಗನವಾಡಿ ಕಟ್ಟಡವನ್ನು ಶಾಸಕ ಸತೀಶ ಜಾರಕಿಹೊಳಿ ಉದ್ಘಾಟಿಸಿದರು. ಸಿ.ಆರ್.ನಂದಗಾಂವಿ, ಮಂಜುನಾಥ ಪಾಟೀಲ, ಈರಣ್ಣ ಬಂಜಿರಾಮ, ನಾಗಪ್ಪ ಚನ್ನನವರ, ಅಬ್ದುಲಗಣಿ ದರ್ಗಾ ಇತರರಿದ್ದರು. 
ಜಿಲ್ಲೆ

ಶೈಕ್ಷಣಿಕ ಸೌಲಭ್ಯಗಳ ಲಾಭ ಪಡೆಯಿರಿ

ಹಿಡಕಲ್ ಡ್ಯಾಂ: ಸರ್ಕಾರ ನೀಡುವ ಶೈಕ್ಷಣಿಕ ಸೌಲಭ್ಯ ಸದುಪಯೋಗ ಪಡಿಸಿಕೊಳ್ಳಿ ಎಂದು ಶಾಸಕ ಸತೀಶ ಜಾರಕಿಹೊಳಿ ಸಲಹೆ ನೀಡಿದರು.
ಹುಕ್ಕೇರಿ ತಾಲೂಕಿನ ರುಸ್ತುಂಪುರ ಗ್ರಾಮದಲ್ಲಿ ನರೇಗಾ ಹಾಗೂ ಇಲಾಖೆಯ ಎಸ್.ಡಿ.ಪಿ ಒಗ್ಗೂಡಿಸುವಿಕೆ ಯೋಜನೆಯಲ್ಲಿ ಮಂಜೂರಾದ 10 ಲಕ್ಷ ರೂ. ಅನುದಾನದಲ್ಲಿ ನಿರ್ಮಾಣವಾದ ಅಂಗನವಾಡಿ ಕಟ್ಟಡವನ್ನು ಇತ್ತೀಚೆಗೆ ಉದ್ಘಾಟಿಸಿ ಮಾತನಾಡಿದ ಅವರು, ಯಮಕನಮರಡಿ ಮತಕ್ಷೇತ್ರದ ಎಲ್ಲ ಶಾಲಾ-ಕಾಲೇಜುಗಳಿಗೆ ಶೈಕ್ಷಣಿಕ ಸೌಲಭ್ಯ ನೀಡಿ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ಕೊಡಲು ಪ್ರಯತ್ನಿಸಲಾಗುತ್ತದೆ ಎಂದರು.

ರುಸ್ತುಂಪುರ ಗ್ರಾಪಂ ಪಿಡಿಒ ಸಿ.ಆರ್.ನಂದಗಾಂವಿ ಮಾತನಾಡಿದರು. ಜಿಪಂ ಮಾಜಿ ಸದಸ್ಯ ಮಂಜುನಾಥ ಪಾಟೀಲ, ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಂಘದ ನಿರ್ದೇಶಕ ಈರಣ್ಣ ಬಂಜಿರಾಮ, ಗ್ರಾಪಂ ಅಧ್ಯಕ್ಷ ನಾಗಪ್ಪ ಚನ್ನನವರ, ಅಬ್ದುಲ್‌ಗಣಿ ದರ್ಗಾ, ವಿನೋದ ಡೊಂಗ್ರೆ, ಮಾರುತಿ ಗುಟಗುದ್ದಿ, ಗ್ರಾಪಂ ಸದಸ್ಯ ಭೀಮಶಿ ಬೋರವಗೋಳ, ಈರಪ್ಪ ಇದರಗುಚ್ಚಿ, ಮಲ್ಲಿಕಾರ್ಜುನ ಪೂಜೇರಿ, ಪರಸಪ್ಪ ಪೂಜೇರಿ, ಭೀಮರಾಯಿ ಲಂಕೆನ್ನವರ, ಡಾ. ವಿನಾಯಕ ಹಜ್ಜೆ, ಎನ್.ಎಸ್.ಮೋಮಿನ್, ರಫೀಕ್ ನದ್ಾ ಇತರರಿದ್ದರು.