ಜಿಲ್ಲೆ

ಶೈಕ್ಷಣಿಕ ಸುಧಾರಣೆ ಮಾಡದ ಕಾಂಗ್ರೆಸ್​

ಕಲಬುರಗಿ: ಕಲ್ಯಾಣ ರ‍್ನಾಟಕದಲ್ಲಿ ಕಳೆದ ಆರು ದಶಕದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್​ ಪಕ್ಷವು ಈ ಭಾಗದ ಶೈಕ್ಷಣಿಕ ಸುಧಾರಣೆ ಏಕೆ ಮಾಡಿಲ್ಲ ಎಂಬುದನ್ನು ಜಿಲ್ಲೆಯ ಸಚಿವರು ಉತ್ತರಿಸಲಿ. ಎಲ್ಲದ್ದಕ್ಕೂ ದೊಡ್ಡದಾಗಿ ಮಾತಾಡುವವರು ಎಸ್ಸೆಸ್ಸೆಲ್ಸಿ ಲಿತಾಂಶದ ಬಗ್ಗೆ ಬಾಯಿ ತೆರೆಯಲಿ ಎಂದು ಮಾಜಿ ಶಾಸಕ, ವಕ್ತಾರ ರಾಜಕುಮಾರ ಪಾಟೀಲ್​ ತೇಲ್ಕೂರ ಆಗ್ರಹಿಸಿದ್ದಾರೆ.

ಎಸ್ಸೆಸ್ಸೆಲ್ಸಿ, ಪಿಯು ಲಿತಾಂಶದಲ್ಲಿ ಕಟ್ಟ ಕಡೆಯ ಸ್ಥಾನ ಪಡೆದಿರುವುದು ಜಿಲ್ಲೆಯ ಜನಪ್ರತಿನಿಧಿಗಳು ನಾಚಿಕೆ ಪಡುವಂತಾಗಿದೆ. ಆಡಳಿತದಲ್ಲಿದ್ದರೂ ಸುಧಾರಣೆ ಏನಾಗಿದೆ ಎಂದು ಪ್ರಕಟಣೆ ಮೂಲಕ ಸವಾಲು ಹಾಕಿದ್ದಾರೆ.

ಖಾಲಿ ಶಿಕ್ಷಕರ ಹುದ್ದೆ ರ‍್ತಿ ಮಾಡದಿರುವುದು, ಅತಿಥಿ ಶಿಕ್ಷಕರನ್ನು ಶೈಕ್ಷಣಿಕ ಆರಂಭದಲ್ಲಿ ರ‍್ತಿ ಮಾಡದೇ ರ‍್ಧ ಅವಧಿಗೆ ನೇಮಕ ಮಾಡುವುದು ಸಲ್ಲದು. ಶಾಲೆಗಳ ಸುಧಾರಣೆಗೆ ಆಸಕ್ತಿ ವಹಿಸಿಲ್ಲ. ಶೈಕ್ಷಣಿಕ ಕರ‍್ಯ ಚಟುವಟಿಕೆಗಳ ಮೇಲೆ ನಿಗಾ ವಹಿಸಿ, ಜಿಲ್ಲೆಯಲ್ಲಿರುವ ಶಿಕ್ಷಣ ಆಯುಕ್ತರ ಕಚೇರಿ ದರ‍್ಬಲಗೊಳಿಸಿರುವುದು ಈ ರ‍್ಕಾರದ ವೈಲ್ಯ ಎಂದು ಆರೋಪಿಸಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್​ ರ‍್ಖಗೆ ಅವರಿಗೆ ಒಂದು ರ‍್ಷದಿಂದ ಕೆಡಿಪಿ ಸಭೆ ನಡೆಸುತ್ತಿಲ್ಲ. ನಿಯಮಿತ ಕೆಡಿಪಿ ಸಭೆ ನಡೆಸಿ, ಶಿಕ್ಷಣ ಇಲಾಖೆ ಪ್ರಗತಿ ಪರಿಶೀಲಿಸಿ ನ್ಯೂನ್ಯತೆಗಳ ನಿವಾರಣೆ ಕ್ರಮ ಕೈಗೊಂಡು, ಗುರಿ ನಿಗದಿಪಡಿಸಿದ್ದರೆ ಲಿತಾಂಶ ಅಭಿವೃದ್ಧಿ ಆಗುತ್ತಿತ್ತು. ಏನನ್ನೂ ಮಾಡದೆ ಬರಿ ರಾಜಕಾರಣ ಮಾತಾಡುತ್ತ ಪಲಾಯನ ಮಾಡುತ್ತಿದ್ದಾರೆ ಎಂದಿದ್ದಾರೆ. ಟೀಕೆ, ಟಿಪ್ಪಣ್ಣಿ ಬಿಟ್ಟು ಪ್ರಾಮಾಣಿಕವಾಗಿ ಕೆಲಸ ಮಾಡಲಿ ಎಂದು ಆಗ್ರಹಿಸಿದ್ದಾರೆ.