ಜಿಲ್ಲೆ

ಶೈಕ್ಷಣಿಕ ಭಾಗೀದಾರರ ಪಾತ್ರ ಮುಖ್ಯ

ಚಿತ್ರದುರ್ಗ: ಮಕ್ಕಳ ಗುಣಮಟ್ಟದ ಶಿಕ್ಷಣಕ್ಕಾಗಿ ಶೈಕ್ಷಣಿಕ ಭಾಗೀದಾರರ ಪಾತ್ರ ಮುಖ್ಯ ಡಯಟ್ ಪ್ರಾಚಾರ‌್ಯ ಎಂ.ನಾಸಿರುದ್ದೀನ್ ಹೇಳಿದರು.
ನಗರದ ಡಯಟ್‌ನಲ್ಲಿ ಸೋಮವಾರ ಹೊಸದುರ್ಗ ತಾಲೂಕು ಬಿಇಒ ಆಗಿ ವರ್ಗಾವಣೆಯಾಗಿರುವ ಸೈಯದ್ ಮೋಸಿನ್ ಹಾಗೂ ದಾವಣಗೆರೆ ಡಯಟ್‌ಗೆ ಹಿರಿಯ ಉಪನ್ಯಾಸಕರಾಗಿ ವರ್ಗಾವಣೆಯಾದ ಮಹಮದ್ ಅಯೂಬ್ ಸೊರಬ್ ಅವರಿಗೆ ಆಯೋಜಿಸಿದ್ದ ಕಾರ‌್ಯಕ್ರಮದಲ್ಲಿ ಬಿಡುಗಡೆ ಪತ್ರ ನೀಡಿ ಮಾತನಾಡಿದರು.

ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಶಿಕ್ಷಕರು, ಪೋಷಕರು,ಎಸ್‌ಡಿಎಂಸಿ ಪಾತ್ರ ಮತ್ತು ಇಲಾಖೆ ಅಧಿಕಾರಿಗಳ ಮಾರ್ಗದರ್ಶನ ಮುಖ್ಯ ಎಂದರು. ಹಿರಿಯ ಉಪನ್ಯಾಸಕ ಸಿ.ಎಸ್. ವೆಂಕಟೇಶ್,ಉಪನ್ಯಾಸಕರಾದ ಆರ್.ನಾಗರಾಜು,ಯು.ಸಿದ್ದೇಶ್, ಎಸ್.ಬಸವರಾಜು, ಬಿ.ಎಸ್.ನಿತ್ಯಾನಂದ, ಎನ್.ರಾಘವೇಂದ್ರ, ಜಿ. ಎಸ್.ನಾಗರಾಜು, ತಾಂತ್ರಿಕ ಸಹಾಯಕ ಕೆ.ಆರ್.ಲೋಕೇಶ್ ಮತ್ತಿತರರಿದ್ದರು.