?????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????? 
ಜಿಲ್ಲೆ

ಶೈಕ್ಷಣಿಕ ಪ್ರಗತಿಗೆ ವಿದ್ಯಾರ್ಥಿ ಮಿತ್ರ ಸಹಕಾರಿ

ಚನ್ನಬಸಯ್ಯ ಗುರುವಿನ

ದೋರನಹಳ್ಳಿ: ಮಕ್ಕಳ ಶೈಕ್ಷಣಿಕ ಪ್ರಗತಿಗೆ ವಿಜಯವಾಣಿ ವಿದ್ಯಾರ್ಥಿ ಮಿತ್ರ ಸಹಕಾರಿಯಾಗಿದೆ ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ದೇವರಾಜ ಮೌರ್ಯ ಹೇಳಿದರು.

ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಗುರುವಾರ ವಿಜಯವಾಣಿ ವಿದ್ಯಾರ್ಥಿ ಮಿತ್ರ ಸಂಚಿಕೆ ವಿದ್ಯಾರ್ಥಿಗಳಿಗೆ ವಿತರಿಸಿ ಮಾತನಾಡಿದ ಅವರು, ಬಡವರು, ಮಧ್ಯಮ ವರ್ಗದ ಮಕ್ಕಳು ಹೆಚ್ಚಾಗಿ ಸರ್ಕಾರಿ ಶಾಲೆಗಳನ್ನೆ ಅವಲಂಭಿಸಿದ್ದು, ಈ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಈ ಸಂಚಿಕೆ ಹೆಚ್ಚಿನ ನೆರವಾಗಲಿದೆ ಎಂದರು.

ಶಿಕ್ಷಣ ಪಡೆಯುವುದು ನಮ್ಮೆಲ್ಲರ ಮೂಲ ಹಕ್ಕಾಗಿದ್ದು, ಮೈ ಮೇಲೆ ಹರಿದ ಬಟ್ಟೆ ಇದ್ದರೂ ಪರ್ವಾಗಿಲ್ಲ ಕೈಯಲ್ಲೊಂದು ಪುಸ್ತಕವಿರಲಿ ಎಂದು ಡಾ.ಅಂಬೇಡ್ಕರ್ ಹೇಳಿದ್ದಾರೆ. ಹೀಗಾಗಿ ಮಕ್ಕಳು ಈ ಪತ್ರಿಕೆಯ ಲಾಭ ಪಡೆದುಕೊಳ್ಳಬೆಕು ಎಂದು ಕಿವಿಮಾತು ಹೇಳಿದರು.

ಬೀದಿ ದೀಪದ ಕೆಳಗೆ ಕುಳಿತು ಓದಿದ ವಿಶ್ವೇಶ್ವರಯ್ಯ, ದಿನಪತ್ರಿಕೆ ವಿತರಿಸಿ ವಿಜ್ಞಾನಿ, ರಾಷ್ಟçಪತಿಯಾದ ಡಾ.ಎಪಿಜೆ ಅಬ್ದುಲ್ ಕಲಾಂ, ಪತ್ರಕರ್ತರಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾದರು ಇಂತಹ ಮಹಾನ್ ವ್ಯಕ್ತಿಗಳು ವಿದ್ಯಾರ್ಥಿ ಜೀವನದಲ್ಲಿ ಆದರ್ಶರಾಗಿರಬೇಕು. ಅಲ್ಲದೆ ನಾನೂ ಕೂಡ ವಿದ್ಯಾರ್ಥಿ ಮಿತ್ರ ಅಭ್ಯಾಸ ಮಾಡುವ ಮೂಲ ಇಂದು ಸರ್ಕಾರಿ ಸರ್ಕಾರಿ ಅಧಿಕಾರಿಯಾಗಿz್ದೆÃನೆ ಎಂದರು.

ಗ್ರAಥಪಾಲಕ ಹಯ್ಯಾಳಪ್ಪ ಗುಂಟನೂರ ಮಾತನಾಡಿದರು. ಈ ವೇಳೆ ಮುಖ್ಯಗುರು ಶಾಂತಪ್ಪ ಕೆರಟಗಿ, ಗ್ರಾಪಂ ಅಧ್ಯಕ್ಷೆ ಚಂದ್ರಾವತಿ ಗ್ರಾಮಸ್ಥರಾದ ವೆಂಕಟೇಶ ಜೆ ಕಶೇಟ್ಟಿ, ಹುಸೇನಿ, ದೇವಪ್ಪ ಮಾಡಗಿ, ವಿಶಾಲ ಕುಮಾರ ಶಿಂಧೆ ಇತರರಿದ್ದರು.