filter: 0; fileterIntensity: 0.0; filterMask: 0; captureOrientation: 0; runfunc: 0; algolist: 0; multi-frame: 1; brp_mask:0; brp_del_th:0.0000,0.0000; brp_del_sen:0.0000,0.0000; motionR: 0; delta:null; bokeh:0; module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 293.15912;aec_lux_index: 0;albedo: ;confidence: ;motionLevel: 0;weatherinfo: null;temperature: 38; 
ಜಿಲ್ಲೆ

ಶೈಕ್ಷಣಿಕ ಪ್ರಗತಿಗೆ ಬೇಕು ಹಳೇ ವಿದ್ಯಾರ್ಥಿಗಳ ಸಂಘ

ದೋರನಹಳ್ಳಿ: ಶೈಕ್ಷಣಿಕವಾಗಿ ಅತಿ ಹೆಚ್ಚು ಸಮಸ್ಯೆ ಎದುರಿಸುತ್ತಿರುವ ದೋರನಹಳ್ಳಿ ಗ್ರಾಮ ಅವುಗಳ ಸಮಸ್ಯೆ ಪರಿಹಾರಕ್ಕೆ ಹಳೇ ವಿದ್ಯಾರ್ಥಿಗಳ ಸಂಘ ಅಗತ್ಯವಿದೆ ಎಂದು ಹಳೇ ವಿದ್ಯಾರ್ಥಿ ವಿಶಾಲಕುಮಾರ ಶಿಂಧೆ ಹೇಳಿದರು.

ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಭಾನುವಾರ ಕರೆದಿದ್ದ ಹಳೇ ವಿದ್ಯಾರ್ಥಿಗಳ ಸಭೆಯಲ್ಲಿ ಮಾತನಾಡಿದ ಅವರು, ನಮ್ಮದು ದೊಡ್ಡ ಗ್ರಾಮವಾಗಿದ್ದು, ಇಲ್ಲಿ ಐದಾರು ಪ್ರಾಥಮಿಕ ಶಾಲೆ ಒಂದು ಸರ್ಕಾರಿ ಪ್ರೌಢಶಾಲೆ ಇದೆ. ಆದರೆ ಇಲ್ಲಿ ಸಹಲವು ಸಮಸ್ಯೆಗಳಿದ್ದು, ಅವುಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕಾಗಿದೆ. ಆ ಕಾರ್ಯವನ್ನು ನಮ್ಮ ಹಳೇ ವಿದ್ಯಾರ್ಥಿಗಳ ಸಂಘದಿAದ ಹಂತ ಹಂತವಾಗಿ ಮಾಡುವುದಾಗಿ ಭರವಸೆ ನೀಡಿದರು.

ಶಾಲೆಯಲ್ಲಿ ಕೊಠಡಿ, ಶಿP್ಷÀಕರ ಕೊರತೆ ಮತ್ತು ಮೂಲಭೂತ ಸೌಕರ್ಯ ಸೇರಿ ಶೈP್ಷÀಣಿಕವಾಗಿ ಭವಿಷ್ಯದ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಈ ಸಂಘ ಕೆಲಸ ಮಾಡಲಿದೆ. ಇಲ್ಲಿ ಯಾವುದೇ ಜಾತಿ, ಮತ, ಪಂಥ, ಧರ್ಮ ಮತ್ತು ರಾಜಕಿಯ ಪಕ್ಷಗಳಿಗೆ ಪ್ರವೇಶ ಇಲ್ಲ. ಇದು ಪಕ್ಷಾತೀತವಾಗಿ ಗ್ರಾಮದ ಶೈಕ್ಷಣಿಕ ಅಭಿವೃದ್ಧಿ ಮಾತ್ರ ಶ್ರಮಿಸಲಿದೆ ಎಂದು ಹೇಳಿದರು.

ಗ್ರಾಮದಲ್ಲಿ ಶೈP್ಷÀಣಿಕವಾಗಿ ಉತ್ತಮವಾದ ಸೇವೆ ಸಲ್ಲಿಸಿದ ಶಿP್ಷÀಕರನ್ನು ಈ ಸಂಘದ ಮೂಲಕ ಗೌರವಿಸುವುದು, ನಮ್ಮ ಶಾಲೆಯಲ್ಲಿ ೨೧ ವರ್ಷ ಸುದೀರ್ಘ ಸೇವೆ ಸಲ್ಲಿಸಿ ಅP್ಷÀರ ದಾಸೋಹ ಅಧಿಕಾರಿಯಾಗಿ ನಿವೃತ್ತರಾದ ಮಲ್ಲಣ್ಣಗೌಡ ಎಂ.ಬಿರಾದಾರ ಅವರನ್ನು ಜೂ.೨೮ ರಂದು ವಿಶೇಷವಾಗಿ ಸನ್ಮಾನಿಸುವ ಮೂಲಕ ಸಂಘದ ಮೊದಲ ಚಟುವಟಿಕೆ ಆರಂಭಿಸಲಾಗುವುದು ಎಂದು ಹೇಳಿದರು.

ಈ ವೇಳೆ ಮಹಾಂತೇಶ ನೀಲಂಕಾರ, ಅಮರೇಶ ಗೋಲಗೇರಿ, ಹಯ್ಯಾಳಪ್ಪ ಗುಂಟನೂರ್, ಖಂಡಪ್ಪ ಅಗಸಿ, ಆನಂದ ನಾಶಿ, ಮಂಜುನಾಥ ಕಂಚಗಾರ, ಗಣಪತಿ ಬಂಟನೂರ, ಶರಣು ಕಂಬಾರ, ಪರಪ್ಪ ಮಲಗೊಂಡ, ಈರಣ್ಣ ಕಸನï , ಮಹೇಶ ಪತ್ತಾರ, ಚಿದಾನಂದ ತಳವಾರ, ದಶವಂತ ದೊರೆ, ಗಣಪತಿ ನಾಲವಾರ, ಮಲ್ಲರಡ್ಡಿ ದೊರೆ, ಭೀಮ ಆಂದೇಲಿ, ಮರಿಲಿಂಗ ಕೌದಿ ಇತರರಿದ್ದರು.