ಜಿಲ್ಲೆ

ಶೈಕ್ಷಣಿಕ ಕ್ಷೇತ್ರದ ಅಭಿವೃದ್ಧಿಗೆ ಸಹಕಾರ ನೀಡುವೆ

Yadgiri - Laxmikanth Kulkarni

ಯಾದಗಿರಿ: ಜಿಲ್ಲೆಯನ್ನು ಶೈಕ್ಷಣಿಕವಾಗಿ ಮುಂದೆ ತರಲು ಬೇಕಾದ ಎಲ್ಲ ರೀತಿಯ ಸಹಕಾರ ನೀಡಲು ನಾನು ಬದ್ಧನಿರುವುದಾಗಿ ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರ ತಿಳಿಸಿದರು.
ಶನಿವಾರ ನಗರದ ಸರಕಾರಿ ಪದವಿ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಭಾರತದಲ್ಲಿ ಪ್ರಾದೇಶಿಕ ಅಸಮಾನತೆ ಶಿಷರ್ಿಕೆಯಡಿ ಕಲ್ಯಾಣ ಕನರ್ಾಟಕದ ವಿಶೇಷ ಅಧ್ಯಯನದ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿ, ಈ ಕಾಲೇಜು ಭೌತಿಕವಾಗಿ ಬೃಹದಾಕಾರವಾಗಿ ಮತ್ತು ಶೈಕ್ಷಣಿಕವಾಗಿ ಗುಣಮಟ್ಟದಿಂದ ಬೆಳೆಯುತ್ತಿದೆ. ಇಲ್ಲಿನ ಸ್ನಾತಕೋತ್ತರ ಕೇಂದ್ರ ಆರಂಭಿಸುವ ಅಗತ್ಯವಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಪ್ರೋ.ಸಾಬಣ್ಣ ತಳವಾರ ದಿಕ್ಸೂಚಿ ಭಾಷಣ ಮಾಡಿ, ನಮ್ಮ ಕಲ್ಯಾಣ ಕನರ್ಾಟಕ ಪ್ರಾದೇಶಿಕವಾಗಿ, ಪ್ರಾಕೃತಿಕವಾಗಿ, ಸಾಮಾಜಿಕವಾಗಿ ಮತ್ತು ಸಾಹಿತ್ಯಿಕವಾಗಿ ಸಾಕಷ್ಟು ಸಂಪತ್ಭರಿತವಾಗಿದ್ದರೂ ಹಿಂದುಳಿದ ಭಾಗ ಎಂಬ ಹಣೆಪಟ್ಟಿಯಿಂದ ಹೊರಬರಲು ಸಾಧ್ಯವಾಗದಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದರು.
ನಮ್ಮ ಭಾಗದ ರಾಜಕೀಯ ಧುರೀಣರ ಇಚ್ಛಾಶಕ್ತಿ ಕೊರತೆಯಿಂದಾಗಿ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತಿಲ್ಲ. ಕೆಕೆಆರ್ಡಿಬಿಗೆ ಸಕರ್ಾರದಿಂದ ಬಿಡುಗಡೆಯಾಗುವ ಸಾವಿರಾರು ಕೋಟಿ ಅನುದಾನ ಬಳಕೆಯಾಗದೆ ಮರಳಿ ಹೋಗುತ್ತಿರುವುದು ಬೇಸರದ ಸಂಗತಿ ಎಂದರು.
ಪ್ರಾಚಾರ್ಯ ಪ್ರೋ.ಸುಭಾಶ್ಚಂದ್ರ ಕೌಲಗಿ, ಕಸಾಪ ಜಿಲ್ಲಾಧ್ಯಕ್ಷ ಡಾ.ಸಿದ್ದಪ್ಪ ಹೊಟ್ಟಿ, ಐಕೆಎಸಿ ಸಂಚಾಲಕ ಡಾ.ದೇವೀಂದ್ರಪ್ಪ ಹಳಿಮನಿ, ಸಂಪನ್ಮೂಲ ವ್ಯಕ್ತಿಗಳಾದ ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಅಶೋಕ ಆ್ಯಂಟನಿ ಡಿಸೋಜಾ, ಧಾರವಾಡದ ಕನರ್ಾಟಕ ವಿವಿಯ ಡಾ.ಮಲ್ಲಪ್ಪ ಬಂಡಿ ಇದ್ದರು.